ಅನಗತ್ಯವಾಗಿ ತಾಜ್'ಮಹಲ್ ವಿವಾದ ಸೃಷ್ಟಿಸಲಾಗುತ್ತಿದೆ: ಪರೇಶ್ ರಾವಲ್

ಅನಗತ್ಯವಾಗಿ ತಾಜ್'ಮಹಲ್ ವಿವಾದವನ್ನು ಸೃಷ್ಟಿಸಲಾಗುತ್ತಿದ್ದು, ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ನಟ ಹಾಗೂ ರಾಜಕೀಯ ನಾಯಕ ಪರೇಶ್ ರಾವಲ್ ಅವರು ಶುಕ್ರವಾರ ಹಳಿದ್ದಾರೆ...
ನಟ ಹಾಗೂ ರಾಜಕೀಯ ನಾಯಕ ಪರೇಶ್ ರಾವಲ್
ನಟ ಹಾಗೂ ರಾಜಕೀಯ ನಾಯಕ ಪರೇಶ್ ರಾವಲ್
ನವದೆಹಲಿ: ಅನಗತ್ಯವಾಗಿ ತಾಜ್'ಮಹಲ್ ವಿವಾದವನ್ನು ಸೃಷ್ಟಿಸಲಾಗುತ್ತಿದ್ದು, ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ನಟ ಹಾಗೂ ರಾಜಕೀಯ ನಾಯಕ ಪರೇಶ್ ರಾವಲ್ ಅವರು ಶುಕ್ರವಾರ ಹಳಿದ್ದಾರೆ. 
ತಾಜ್'ಮಹಲ್ ಇಷ್ಟೂ ದಿನ ಪ್ರೀತಿಯ ಸಂಕೇತವೆಂದು ಹೇಳಲಾಗುತ್ತಿತ್ತು. ಇದೀಗ ಅದು ದ್ವೇಷದ ಚಿಹ್ನೆಯಾಗಿದೆ. ಅನಗತ್ಯವಾಗಿ ತಾಜ್'ಮಹಲ್ ವಿವಾದವನ್ನು ಹುಟ್ಟುಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. 
ಉತ್ತರಪ್ರದೇಶ ಸರ್ಕಾರ ಇತ್ತೀಚೆಗಷ್ಟೇ ತನ್ನ ರಾಜ್ಯ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ನ್ನು ಕೈಬಿಟ್ಟಿತ್ತು. ಇದರ ಪರಿಣಾಮ ಇದೀಗ ಭಾರೀ ಟೀಕೆ, ವಿವಾದಗಳು ಸೃಷ್ಟಿಯಾಗತೊಡಗಿದೆ.
ತಾಜ್ ಮಹಲ್ ಕುರಿತಂತೆ ಪರ ಹಾಗೂ ವಿರೋಧಗಳ ಟೀಕೆಗಳು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ರಾಜಕೀಯ ಕೆಸರೆರಚಾಟಗಳು ಆರಂಭಗೊಂಡಿವೆ. 
ಈ ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು, ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳು. ಹೀಗಾಗಿ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನವಿಲ್ಲ. ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com