ಸರಕು ಮತ್ತೆ ಸೇವಾ ತೆರಿಗೆಯಲ್ಲಿ ಅನುಸರಣೆಗಳ ತೊಡಕು ಇದ್ದು, ಉದ್ಯೋಗ ಹಾಗೂ ಉದ್ಯಮದ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಉಂಟುಮಾಡಿದೆ ಎಂದು ಎಐಸಿಸಿ ಮುಖ್ಯಕಚೇರಿಯಲ್ಲಿ ಜಿಎಸ್ ಟಿ ನಡೆದ ಸಭೆಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಸಿಂಗ್, ಒಂದೆಡೆ ನೋಟು ನಿಷೇಧ ವ್ಯವಸ್ಥಿತ ಲೂಟಿ, ಸುಲಿಗೆಯಾಗಿದ್ದು, ಜಿಎಸ್ ಟಿ ಸಾಮಾನ್ಯ ಜನರ ಉದ್ಯೋಗವನ್ನು ಕಸಿದುಕೊಂಡಿದೆ. ಅನೇಕ ಉದ್ಯಮಗಳು ಮುಚ್ಚಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.