ದುಃಖದ ವಿಚಾರ: ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆಗೆ ಭಾರತ ವಿರೋಧ!

ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ವಿಚಾರ ಇದೀಗ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಭಾರತ ಕೂಡ ಕೊರಿಯಾ ನಡೆಯನ್ನು ಕಟುವಾಗಿ ಟೀಕಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ವಿಚಾರ ಇದೀಗ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಭಾರತ ಕೂಡ ಕೊರಿಯಾ ನಡೆಯನ್ನು ಕಟುವಾಗಿ ಟೀಕಿಸಿದೆ.
ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ ಇದನ್ನು ದುಃಖದ ವಿಚಾರ ಎಂದು ಬಣ್ಣಿಸಿದೆ. ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿರುವ ಭಾರತ ಇಡೀ ವಿಶ್ವವೇ ಅಣ್ವಸ್ತ್ರ ರಹಿತ  ಚಿಂತನೆಯತ್ತ ಹೊರಳುತ್ತಿದ್ದರೆ ಉತ್ತರ ಕೊರಿಯಾದ ನಡೆ ಆ ಚಿಂತನೆಗೇ ದೊಡ್ಡ ಹೊಡೆತವನ್ನು ನೀಡಿದೆ. ಉತ್ತರ ಕೊರಿಯಾ ತನ್ನ ಅಣ್ವಸ್ಚ್ರ ಯೋಜನೆಗಳನ್ನು ಕೈಬಿಡುವ ಮೂಲಕ ತನ್ನ ಪ್ರಾದೇಶಿಕ ಶಾಂತಿಗಾಗಿ ಮಾತ್ರವಲ್ಲದೇ  ವಿಶ್ವದ ಶಾಂತಿ ನಿರ್ವಹಣೆಗೂ ಸಹಕಾರ ನೀಡುವಂತೆ ಆಗ್ರಹಿಸುತ್ತೇವೆ ಎಂದು ಹೇಳಿದೆ.
ಮಿತ್ರ ರಾಷ್ಟ್ರ ಚೀನಾದಿಂದಲೂ ಟೀಕೆ
ಇನ್ನು ಭಾರತ, ಅಮೆರಿಕ, ಜಪಾನ್ ಮಾತ್ರವಲ್ಲದೇ ಉತ್ತರ ಕೊರಿಯಾದ ಮಿತ್ರರಾಷ್ಟ್ರ ಚೀನಾ ಕೂಡ ಉತ್ತರ ಕೊರಿಯಾ ನಡೆಯನ್ನು ಟೀಕಿಸಿದ್ದು, ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಉತ್ತರ ಕೊರಿಯಾ ವಿಶ್ವ ಸಂಸ್ಥೆಯ  ನಿಯಮಾವಳಿಯನ್ನು ಗಾಳಿಗೆ ತೂರಿದೆ ಎಂದು ಟೀಕಿಸಿದೆ. ಇನ್ನು ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಯನ್ನು ವಿಶ್ವ ಸಂಸ್ಥೆಯಲ್ಲಿ ಅಮೆರಿಕ ಪ್ರಸ್ತಾಪಿಸುವ ಸಾಧ್ಯತೆ ಇದ್ದು, ಉತ್ತರ ಕೊರಿಯಾ ಮೇಲೆ ಮತ್ತಷ್ಟು ಕಠಿಣ ನಿರ್ಬಂಧ  ಹೇರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com