ರೊಹಿಂಗ್ಯಾ ವಲಸಿಗರ ಗಡಿಪಾರು ಪ್ರಕರಣ: ಭಾರತ ಕಾನೂನಾತ್ಮಕವಾಗಿ ನಡೆಯಲಿದೆ- ರಿಜಿಜು

ರೊಹಿಂಗ್ಯಾ ವಲಸಿಗರ ಗಡಿಪಾರು ಕುರಿತಂತೆ ಭಾರತ ಕಾನೂನಾತ್ಮಕವಾಗಿ ನಡೆಯಲಿದ್ದು, ವಲಸಿಗರನ್ನು ಗಡಿಪಾರು ಮಾಡಲು ಸೇನಾ ಪಡೆಗಳನ್ನು ಬಳಕೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು...
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು
ನವದೆಹಲಿ: ರೊಹಿಂಗ್ಯಾ ವಲಸಿಗರ ಗಡಿಪಾರು ಕುರಿತಂತೆ ಭಾರತ ಕಾನೂನಾತ್ಮಕವಾಗಿ ನಡೆಯಲಿದ್ದು, ವಲಸಿಗರನ್ನು ಗಡಿಪಾರು ಮಾಡಲು ಸೇನಾ ಪಡೆಗಳನ್ನು ಬಳಕೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಹೇಳಿದ್ದಾರೆ. 
ರೊಹಿಂಗ್ಯಾ ವಲಸಿಗರ ಗಡಿಪಾರು ಪ್ರಕರಣ ಸಂಬಂಧ ಭಾರತದ ವಿರುದ್ಧ ಕೇಳಿ ಬರುತ್ತಿರುವ ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತದಂತೆ ಇತರೆ ಯಾವುದೇ ದೇಶಗಳು ವಲಸಿಗರನ್ನು ಸ್ವೀಕರಿಸುವುದಿಲ್ಲ. ವಲಸಿಗರನ್ನು ಗಡಿಪಾರುವ ಮಾಡುವಾಗ ಭಾರತ ಸೇನಾ ಪಡೆಗಳನ್ನು ಬಳಕೆ ಮಾಡುವುದಿಲ್ಲ. ಕಾನೂನಾತ್ಮಕವಾಗಿ ನಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ. 
ರೊಹಿಂಗ್ಯಾ ವಲಸಿಗರ ವಿಚಾರದಲ್ಲಿ ಭಾರತ ಅಮಾನವೀಯವಾಗಿ ಹಾಗೂ ಅಸಹಿಷ್ಣುತೆಯಿಂದ ವರ್ತಿಸುತ್ತಿದೆ ಎಂದು ಯಾವುದೇ ದೇಶ ಆರೋಪಿಸುವಂತಿಲ್ಲ. ವಲಸಿಗರನ್ನು ಕಾನೂತ್ಮಕವಾಗಿಯೇ ಗಡಿಪಾರು ಮಾಡಲಾಗುತ್ತದೆ. ಸೇನಾಪಡೆಗಳನ್ನು ಬಳಸಿ ಯಾರೊಬ್ಬರನ್ನು ಹೊರಗೆ ಹಾಕುವುದಿಲ್ಲ. ಭಾರತವನ್ನು ಅಮಾನವೀಯ ದೇಶವೆಂದು ಆರೋಪಿಸುತ್ತಿರುವುದು ತಪ್ಪು. ಭಾರತದಂತೆ ವಲಸಿಗರನ್ನು ಇನ್ನಾವುದೇ ದೇಶ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ಮ್ಯಾನ್ಮಾರ್ ನಲ್ಲಿ ಬೌದ್ಧ ಧರ್ಮೀಯರಿಂದ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡ ನಡೆಯುತ್ತಿದ್ದು, ಮಕ್ಕಳು, ಮಹಿಳೆಯರು ಎನ್ನದೆಯೇ ಅಮಾನವೀಯವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 
ಈ ನಡುವೆ ರೊಹಿಂಗ್ಯಾ ಮುಸ್ಲಿಂ ವಲಸಿಗರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನಮ್ಮನ್ನು ಮ್ಯಾನ್ಮಾರ್ ಗೆ ಗಡಿಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com