ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡೋಕ್ಲಾಂ ಬಿಕ್ಕಟ್ಟಿನ ನಂತರ ಗಡಿಯಲ್ಲಿ ರಸ್ತೆ ನಿರ್ಮಾಣ ಚುರುಕುಗೊಳಿಸಿದ ಭಾರತ

ಡೋಕ್ಲಾಂ ಬಿಕ್ಕಟ್ಟಿನ ನಂತರ ಇದೀಗ ಎಚ್ಚೆತ್ತುಕೊಂಡಿರುವ ಭಾರತ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ...
ನವದೆಹಲಿ: ಡೋಕ್ಲಾಂ ಬಿಕ್ಕಟ್ಟಿನ ನಂತರ ಇದೀಗ ಎಚ್ಚೆತ್ತುಕೊಂಡಿರುವ ಭಾರತ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ. 
ಭಾರತ-ಚೀನಾ ಗಡಿಯಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್(ಬಿಆರ್ಒ) 61 ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿದ್ದು ಇದರಲ್ಲಿ 27 ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಿದೆ. ಇನ್ನು 34 ರಸ್ತೆಗಳ ನಿರ್ಮಾಣ ಮಾಡಬೇಕಿದ್ದು 2020-21ರ ಅವಧಿಯೊಳಗೆ ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿದೆ. 
ಡೋಕ್ಲಾಂ ಬಿಕ್ಕಟ್ಟಿನಿಂದಾಗಿ ಚೀನಾ-ಭಾರತ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ನಂತರ ಉಭಯ ದೇಶಗಳು ರಾಜತಾಂತ್ರಿಕ ಚರ್ಚೆ ಮೂಲಕ ಬಿಕ್ಕಟ್ಟಿಗೆ ಅಂತ್ಯವಾಡಿದ್ದವು. ಆದರೆ ಮುಂದಿನ ದಿನಗಳಲ್ಲಿ ಇಂತರ ಸನ್ನಿವೇಶಗಳು ಉದ್ಭವಿಸಿದಾಗ ತ್ವರಿತಗತಿಯಲ್ಲಿ ಸೇನಾ ಜಮಾವಣೆ ಮಾಡಲು ಈ ರಸ್ತೆಗಳು ಬಳಕೆಯಾಗಲಿದೆ. 
ಚೀನಾ ಗಡಿಯಲ್ಲಿ ಬಿಆರ್ಒ ಕಳೆದ ವರ್ಷ 147 ಕಿ.ಮೀ ರಸ್ತೆ ನಿರ್ಮಾಣ ಮಾಡಿದೆ. ಇನ್ನು 2014-15ರಲ್ಲಿ 107 ಕಿ.ಮೀ ಮಾತ್ರ ರಸ್ತೆ ನಿರ್ಮಾಣವಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಒಟ್ಟು 174 ರಿಂದ 233 ಕಿ.ಮೀ ರಸ್ತೆ ನಿರ್ಮಿಸುವ ಗುರಿ ಹೊಂದಿದೆ. 
ಭಾರತ ಮತ್ತು ಚೀನಾ ಗಡಿ ಬಹುತೇಕ ಹಿಮಾಲಯದಲ್ಲಿರುವುದರಿಂದ ರಸ್ತೆ ನಿರ್ಮಾಣಕ್ಕೆ ವರ್ಷದಲ್ಲಿ ಕೇವಲ 4-6 ತಿಂಗಳು ಮಾತ್ರ ಅನುಕೂಲವಾಗುತ್ತೇ ಇದೇ ಸಮಯವನ್ನು ಬಳಸಿಕೊಂಡು ವೇಗವಾಗಿ ರಸ್ತೆ ಕಾಮಗಾರಿ ಮುಗಿಸಲು ಬಿಆರ್ಒ ಅಗತ್ಯ ಸಿದ್ಧತೆಗಳನ್ನು ನಡೆಸಿದೆ. 

Related Stories

No stories found.

Advertisement

X
Kannada Prabha
www.kannadaprabha.com