ಫೇಸ್‌ಬುಕ್‌ ಗೆಳೆಯನಿಂದ ವಂಚನೆ: 8.5 ಲಕ್ಷ ಕಳೆದುಕೊಂಡು ಶಾಲಾ ಶಿಕ್ಷಕಿ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮೋಸ ಹೋಗುವವರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ...
ಫೇಸ್ ಬುಕ್ ವಂಚನೆ
ಫೇಸ್ ಬುಕ್ ವಂಚನೆ
ವಿಜಯವಾಡ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮೋಸ ಹೋಗುವವರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ವಿಜಯವಾಡದ ಶಾಲಾ ಶಿಕ್ಷಕಿಯೊಬ್ಬರು ಫೇಸ್ ಬುಕ್ ಗೆಳೆಯನ ವಂಚನೆಗೆ ಬಲಿಯಾಗಿ ಬರೋಬ್ಬರಿ 8.5 ಲಕ್ಷ ರುಪಾಯಿಯನ್ನು ಕಳೆದುಕೊಂಡಿದ್ದಾರೆ. 
ವಿಜಯವಾಡದ ಕೃಷ್ಣ ಜಿಲ್ಲೆಯ ಪೆನಮಲ್ಲೂರು ಮಂಡಳದ ಕನುರು ಗ್ರಾಮದ ನುಝ್ವಿದ್ ನಲ್ಲಿನ ಸರ್ಕಾರಿ ಶಾಲೆಯ 35 ವರ್ಷದ ಶಿಕ್ಷಕಿ ಕಡಿಯಮ್ ಶಿವ ಕಾಮೇಶ್ವರಿ ಫೇಸ್ ಬುಕ್ ಗೆಳೆಯನ ವಂಚನೆಗೆ ಗುರಿಯಾದ ಮಹಿಳೆ. ಗಂಡನಿಂದ ದೂರವಾಗಿರುವ ಕಾಮೇಶ್ವರಿ ಅವರು ಕೆಲ ವರ್ಷಗಳಿಂದ ಕನುರಿನಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು.
ಕೆಲ ತಿಂಗಳ ಹಿಂದೆ ಆಕೆ ಫೇಸ್ ಬುಕ್ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ಆಕೆಯ ಅಕೌಂಟ್ ಗೆ ಅಶ್ವಿ ತಾಮ್ಸನ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಜತೆಗೆ ತಾನು ಯುಕೆಯ ಸ್ಕಾಟ್ಲೆಂಡ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಆತ ಯುಕೆಯಿಂದ 41 ಮೌಲ್ಯದ ಚಿನ್ನಾಭರಣ ಮತ್ತು ಪೀಠೋಪಕರಣಗಳನ್ನು ದೆಹಲಿಗೆ ಕಳುಹಿಸಿರುವುದಾಗಿ ಹೇಳಿದ್ದ. ಅದಕ್ಕೆ ಸರ್ವಿಸ್ ಚಾರ್ಚ್ ಪಾವತಿಸುವಂತೆ ಕಾಮೇಶ್ವರಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ. 
ಇದಾದ ಬಳಿಕ ದೆಹಲಿಯಿಂದ ಇಲಿದ್ ಕೊರಿಯರ್ ಸರ್ವಿಸ್ ಕಂಪನಿಯ ಹೆಸರು ಹೇಳಿಕೊಂಡು ಕಾಮೇಶ್ವರಿಗೆ ಕರೆ ಮಾಡಿ ಅಶ್ವಿ ಥಾಮ್ಸನ್ ಅವರು ವಸ್ತುಗಳನ್ನು ಕಳುಹಿಸಿದ್ದಾರೆ. ಕೂಡಲೇ ಸರ್ವಿಸ್ ಚಾರ್ಚ್ ಪಾವತಿಸಿ ವಸ್ತುಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಕಾಮೇಶ್ವರಿ ಅವರು ಐಸಿಐಸಿಐ ಮತ್ತು ಎಸ್ ಬಿಐ ಬ್ಯಾಂಕ್ ನಿಂದ 8.52 ಲಕ್ಷ ರುಪಾಯಿ ಡ್ರಾ ಮಾಡಿ ಅಭಿಶೇಕ್ ಶರ್ಮಾ ಮತ್ತು ಅನುಶಾ ಅಗರ್ವಾಲ್ ಅವರ ಖಾತೆಗೆ ಹಣ ಜಮಾ ಮಾಡಿದ್ದಾರೆ. 
ಇದಾದ ಮೇಲೆ ಮತ್ತೇ ಕೊರಿಯರ್ ಕಂಪನಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು ಇದರಿಂದ ಆತಂಕಕೊಂಡ ಕಾಮೇಶ್ವರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೆನಮಲ್ಲೂರು ಪೊಲೀಸರು ವಂಚನೆ ಆರೋಪ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com