ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಮಗುವನ್ನು ಎಲೆ ಆಕೃತಿಗೆ ಕಟ್ಟಿ ಮೆರವಣಿಗೆ: ತೀವ್ರ ಖಂಡನೆ

ಪೊಲೀಸರು ಮತ್ತು ಪೋಷಕರ ಸಮ್ಮುಖದಲ್ಲೇ 3 ವರ್ಷದ ಮಗುವೊಂದನ್ನು ಎಲೆಯಾಕಾರದ ಆಕೃತಿಗೆ ಕಟ್ಟಿ 2 ಗಂಟೆಗಳಿಗೆ ಹೆಚ್ಚು ಕಾಲ ಮೆರವಣಿಗೆ ಮಾಡಿದ ಅಮಾನವೀಯ...
ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಮಗುವನ್ನು ಎಲೆ ಆಕೃತಿಗೆ ಕಟ್ಟಿ ಮೆರವಣಿಗೆ
ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಮಗುವನ್ನು ಎಲೆ ಆಕೃತಿಗೆ ಕಟ್ಟಿ ಮೆರವಣಿಗೆ
ತಿರುನಂತಪುರ: ಪೊಲೀಸರು ಮತ್ತು ಪೋಷಕರ ಸಮ್ಮುಖದಲ್ಲೇ 3 ವರ್ಷದ ಮಗುವೊಂದನ್ನು ಎಲೆಯಾಕಾರದ ಆಕೃತಿಗೆ ಕಟ್ಟಿ 2 ಗಂಟೆಗಳಿಗೆ ಹೆಚ್ಚು ಕಾಲ ಮೆರವಣಿಗೆ ಮಾಡಿದ ಅಮಾನವೀಯ ಘಟನೆಗೆ ಕೇರಳ ರಾಜ್ಯ ಸಾಕ್ಷಿಯಾಗಿದೆ. 
ಕಣ್ಣೂರಿನಲ್ಲಿ ಕಳೆದ ವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ವೇಲೆ 3 ವರ್ಷದ ಮಗುವಿಗೆ ಕೃಷ್ಣನಂತೆ ವೇಷ ಭೂಷಣ ಮಾಡಿ ಬಿಸಿಲಿನಲ್ಲೇ ಕಟ್ಟಿ ಹಾಕಲಾಗಿತ್ತು. ಸ್ತಬ್ಧ ಚಿತ್ರವೊಂದರ ಭಾಗವಾಗಿ ಮಗುವನ್ನು ಈ ರೀತಿ ಅಲಂಕರಿಸಲಾಗಿತ್ತು.
ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದೆ. ಅಲ್ಲದೆ, ಈ ಘಟನೆ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ಸೂಚನೆ ನೀಡಿದೆ. 
ಎಲೆಯಾಕಾರದ ಬೋರ್ಡ್ ಗೆ ಕಟ್ಟಿ ಹಾಕಲಾಗಿದ್ದ ವೇಳೆ ಮಗು ತನ್ನ ಸಹಾಯಕ್ಕಾಗಿ ಗೋಗರೆದಿಲ್ಲವಾದರೂ, ನೋವು ಮತ್ತು ಪ್ರಾಯಸಪಟ್ಟಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com