ಕೇರಳ ಲವ್ ಜಿಹಾದ್ ಪ್ರಕರಣ: ಎನ್ಐಎ ತನಿಖೆ ಸ್ಥಗಿತಗೊಳಿಸುವಂತೆ ಸುಪ್ರೀಂಗೆ ಯುವತಿಯ ಪತಿ ಮನವಿ

ಕೇರಳ ಲವ್ ಜಿಹಾದ್ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ನಡೆಸುತ್ತಿರುವ ತನಿಖೆಯನ್ನು ಸ್ಥಗಿತಗೊಳಿಸುವಂತೆ ಯುವತಿಯ ಪತಿ ಶಫಿನ್ ಜಹಾನ್ ಅವರು ಸುಪ್ರೀಂಕೋರ್ಟ್'ಗ ಶನಿವಾ ಮನವಿ ಮಾಡಿಕೊಂಡಿದ್ದಾರೆ...
ಮತಾಂತರಗೊಂಡಿರುವ ಕೇರಳ ಯುವತಿ ಹಾದಿಯಾ ಹಾಗೂ ಶಫಿನ್ ಜಹಾನ್
ಮತಾಂತರಗೊಂಡಿರುವ ಕೇರಳ ಯುವತಿ ಹಾದಿಯಾ ಹಾಗೂ ಶಫಿನ್ ಜಹಾನ್
Updated on: 
ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ನಡೆಸುತ್ತಿರುವ ತನಿಖೆಯನ್ನು ಸ್ಥಗಿತಗೊಳಿಸುವಂತೆ ಯುವತಿಯ ಪತಿ ಶಫಿನ್ ಜಹಾನ್ ಅವರು ಸುಪ್ರೀಂಕೋರ್ಟ್'ಗ ಶನಿವಾ ಮನವಿ ಮಾಡಿಕೊಂಡಿದ್ದಾರೆ. 
ವಿವಾದ ಬಳಿಕ ಹಾದಿಯಾ ಮನೆಯವರು ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ, ಕಿರುಕುಳ ನೀಡುತ್ತಿದ್ದಾರೆ. ಹಾದಿಯಾಳನ್ನು ಭೇಟಿ ಮಾಡಲು ಆಕೆಯ ಪೋಷಕರು ಅವಕಾಶ ನೀಡುತ್ತಿಲ್ಲ. ಆಕೆಯನ್ನು ಮನೆಯಲ್ಲಿ ಕೂಡಿ ಹಾಕಲಾಗಿದೆ. ಹೋರಾಟಗಾರರು, ಪ್ರತಿಭಟನಾಕಾರರು ಆಕೆಯನ್ನು ಭೇಟಿ ಮಾಡಬೇಕೆಂದರೂ ಕೂಡ ಅದಕ್ಕೆ ಮನೆಯವರು ಒಪ್ಪುತ್ತಿಲ್ಲ ಎಂದು ಶಫಿನ್ ಆರೋಪಿಸಿದ್ದಾರೆ. 
ಅರ್ಜಿಯಲ್ಲಿ ಕೆಲ ವಿಡಿಯೋಗಳ ದೃಶ್ಯಾವಳಿಗಳನ್ನು ಕೂಡ ನ್ಯಾಯಾಲಯಕ್ಕೆ ನೀಡಿದ್ದು, ವಿಡಿಯೋಡಲ್ಲಿ ಹಾದಿಯಾ ಧರ್ಮದ ಆಯ್ಕೆ ಕುರಿತು ತನ್ನ ತಾಯಿಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು ಕಂಡು ಬಂದಿದೆ. ಪ್ರತಿಭಟನಾಕಾರರೊಬ್ಬರು ಹಾದಿಯಾ ಮನೆಯೊಳಗೆ ಹೋದ ಸಂದರ್ಭದಲ್ಲಿ ಹಾದಿಯಾ ತನ್ನ ತಾಯಿಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದ ದೃಶ್ಯಾವಳಿಗಳು ಇದಾಗಿದೆ. 
ಕುಟುಂಬಸ್ಥರು ಹಾಗೂ ಕೆಲ ಸಂಘ ಪರಿವಾರದ ಕಾರ್ಯಕರ್ತರು ಹಾದಿಯಾಳನ್ನು ಹಿಂಸಿಸುತ್ತಿದ್ದು, ಆದೇಶ ಹೊರಡಿಸುವುದಕ್ಕೂ ಮುನ್ನು ನ್ಯಾಯಾಲಯದ ಹಾದಿಯಾಳ ಅಭಿಪ್ರಾಯವನ್ನು ಕೇಳಬೇಕು ಎಂದು ಶಫಿನ್ ಮನವಿ ಮಾಡಿದ್ದಾರೆ. 
ಅಖಿಲ ಎಂಬ ಹಿಂದೂ ಯುವತಿಯೊಬ್ಭಳು 2016ರಲ್ಲಿ ಮುಸ್ಲಿಂ ಯುವಕ ಶಫಿನ್ ಜಹಾನ್ ಎಂಬ ಯುವಕನನ್ನು ವಿವಾಹವಾಗಿದ್ದಳು. ವಿವಾಹಾದ ಬಳಿಕ ಯುವಕತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯ ಹೆಸರನ್ನು ಹಾದಿಯಾ ಶಫಿನ್ ಎಂಬು ಬದಲಾಯಿಸಲಾಗಿತ್ತು. 
ಮತಾಂತರ ವಿಚಾರ ತಿಳಿದಿದ್ದ ತಂದೆ ಮಗಳನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಹೇಳಿ ಕೇರಳದ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ರಾಜ್ಯ ಪೊಲೀಸರು ತನಿಖೆ ನಡೆಸುವಂತೆ ಆದೇಶ ನೀಡಿತ್ತು.
ಇದಕ್ಕೆ ಮಹಿಳೆಯ ಪತಿ ಶಫಿನ್ ಜಹಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ. ನ್ಯಾಯಾಲಯದ ಆದೇಶ ಭಾರತದ ಮಹಿಳಾ ಸ್ವಾತಂತ್ರ್ಯಕ್ಕೆ ಮಾಡಿದ ಅವಮಾನ ಎಂದು ಹೇಳಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. 
ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಇದೊಂದು ಅತ್ಯಂತ ಸೂಕ್ಷ್ಮವಾದ ಪ್ರಕರಣವಾಗಿದ್ದು, ಯುವತಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ನೀಡುವಂತೆ ತಿಳಿಸಿತ್ತು. ಬಳಿಕ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಪ್ರಕರಣವನ್ನು ಎನ್ಐಎ ತನಿಖೆ ನಡೆಸುವಂತೆ ಆದೇಶಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com