ನವದೆಹಲಿ: ಸೆಫ್ಟೆಂಬರ್ 2ರಂದು ರಾಜಸ್ಥಾನದ ಪ್ರೊಖ್ರಾನ್ ನಲ್ಲಿ ಎಂ-777 ಹೋವಿಟ್ಜರ್ ಫಿರಂಗಿ ಪರೀಕ್ಷೆ ವೇಳೆ ಸ್ಫೋಟಗೊಂಡಿರುವುದಕ್ಕೆ ದೋಷಪೂರಿತ ಮದ್ದುಗುಂಡು ಪೂರೈಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕ ನಿರ್ಮಿತ ದೂರವ್ಯಾಪ್ತಿಯ ಲಘು ಎಂ-777 ಹೋವಿಟ್ಜರ್ ಫಿರಂಗಿಯನ್ನು ಭಾರತೀಯ ಸೇನೆ ಹೊಸದಾಗಿ ಖರೀದಿಸಿತ್ತು. ಈ ಫಿರಂಗಿಯ ಪರೀಕ್ಷೆ ನಡೆಸುತ್ತಿದ್ದಾಗ ಫಿರಂಗಿ ಸ್ಫೋಟಗೊಂಡಿತ್ತು. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.
ಇನ್ನು ಪ್ರಾಥಮಿಕ ತನಿಖೆಯಲ್ಲಿ ಈ ಮದ್ದುಗುಂಡುಗಳನ್ನು ಪೂರೈಸಿದ್ದ ಕಂಪನಿ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಧೋಷಪೂರಿತ ಮದ್ದುಗುಂಡು ಪೂರೈಕೆ ಮಾಡಿದ ಪರಿಣಾಮ ಫಿರಂಗಿಗಳ ನಳಿಕೆ ಸ್ಫೋಟಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಹುಕೋಟಿ ರುಪಾಯಿಯ ಬೋಪೋರ್ಸ್ ಹಗರಣ ಜಗಜ್ಜಾಹೀರ್ ಆದ ನಂತರ ಭಾರತ ಈ ವರ್ಷ ಮೇ ತಿಂಗಳಿನಲ್ಲಿ 35 ಕೋಟಿ ರುಪಾಯಿ ಮೌಲ್ಯದ ಎರಡು ಹೋವಿಟ್ಜರ್ ಫಿರಂಗಿಗಳನ್ನು ಖರೀದಿಸಿತ್ತು. ಇದರಲ್ಲಿ ಒಂದು ಸ್ಫೋಟಗೊಂಡಿದೆ.