ವಿಶ್ವಸಂಸ್ಥೆಯಲ್ಲಿ ಪಾಕ್'ಗೆ ಮುಖಭಂಗ: ಪಾಕ್ ಅಸ್ಪಷ್ಟ ಸುಳ್ಳುಗಳಿಂದ ಆಘಾತವಾಗಿದೆ- ರಾಮ್ ಮಾಧವ್

ವಿಶ್ವಸಂಸ್ಥೆಯಲ್ಲಿ ಭಾರತದ ಮೇಲೆ ಆರೋಪ ಮಾಡುವ ಭರದಲ್ಲಿದ್ದ ಪಾಕಿಸ್ತಾನ ತೀವ್ರ ಮುಖಭಂಗವನ್ನು ಎದುರಿಸಿರುವುದನ್ನು ನೋಡಿದರೆ ಹಾಗೂ ಭಾರತದ ವಿರುದ್ಧ ಪಾಕಿಸ್ತಾನ ಮಾಡಿರುವ ಅಸ್ಪಷ್ಟ ಸುಳ್ಳುಗಳು ಆಘಾತವನ್ನುಂಟು ಮಾಡಿದೆ...
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್
Updated on: 
ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಮೇಲೆ ಆರೋಪ ಮಾಡುವ ಭರದಲ್ಲಿದ್ದ ಪಾಕಿಸ್ತಾನ ತೀವ್ರ ಮುಖಭಂಗವನ್ನು ಎದುರಿಸಿರುವುದನ್ನು ನೋಡಿದರೆ ಹಾಗೂ ಭಾರತದ ವಿರುದ್ಧ ಪಾಕಿಸ್ತಾನ ಮಾಡಿರುವ ಅಸ್ಪಷ್ಟ ಸುಳ್ಳುಗಳು ಆಘಾತವನ್ನುಂಟು ಮಾಡಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಸೋಮವಾರ ಹೇಳಿದ್ದಾರೆ. 
ವಿಶ್ವಸಂಸ್ಥೆ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿರುದ್ಧ ಆರೋಪ ಮಾಡಲು ಮುಂದಾಗಿದ್ದ ಪಾಕಿಸ್ತಾನ, ಕಾಶ್ಮೀರಿಗರ ಮೇಲೆ ಭಾರತ ದೌರ್ಜನ್ಯ ನಡೆಸುತ್ತಿದೆ ಎಂದು ಹೇಳಿತ್ತು. ಇದಕ್ಕೆ ಸಾಕ್ಷಿಯಾಗಿ ಪ್ಯಾಲೆಸ್ಟೇನ್'ನಲ್ಲಿ ದಾಳಿಗೊಳಗಾದವರ ಫೋಟೋ ತೋರಿಸಿ ತೀವ್ರ ಮುಖಭಂಗವನ್ನು ಎದುರಿಸಿತ್ತು. 
ಪಾಕಿಸ್ತಾನ ಈ ವರ್ತನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಮ್ ಮಾಧವ್ ಅವರು, ಪಾಕಿಸ್ತಾನದ ವರ್ತನೆಯನ್ನು ಕಂಡು ಆಘಾತವಾಗಿದೆ. ಭಾರತದ ವಿದೇಶಾಂಗ ಸಚಿವರು ನೀಡಿದ್ದ ಭಾಷಣಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಸ್ಪಷ್ಟ ಸುಳ್ಳುಗಳನ್ನು ಹೇಳಿದೆ.
ಪಾಕಿಸ್ತಾನ ಈ ನಡೆಯನ್ನು ನೋಡಿದರೆ, ಆರೋಪ ಮಾಡುತ್ತಿರುವ ಪಾಕಿಸ್ತಾನದ ಬಳಿ ಯಾವುದೇ ಆಧಾರಗಳಿಲ್ಲ. ಪಾಕಿಸ್ತಾನ ಸರಿಯಾದ ರೀತಿಯ ನಿರ್ದೇಶನಗಳಿಲ್ಲ. ವಿಶ್ವದ ಶಾಂತಿಯನ್ನು ಹಾಳು ಮಾಡುತ್ತಿರುವ ಸಂಘಟನೆಗಳ ಹಿಡಿತಕ್ಕೆ ಪಾಕಿಸ್ತಾನ ಒಳಗಾಗಿದೆ. ಹೀಗಾಗಿಯೇ ವಿಶ್ವಸಂಸ್ಥೆಯಲ್ಲಿ ಮಾಲಿಹಾ ಲೋಧಿಯವರು ಅಸ್ಪಷ್ಟ ಸುಳ್ಳುಗಳನ್ನು ಹೇಳಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com