ಬಿಎಸ್ಎಫ್ ಯೋಧ ರಮೀಜ್ ಪರ್ರಯ್ ಹತ್ಯೆ ಹಿಂದೆ ಎಲ್ಇಟಿ ಕೈವಾಡ: ಹಿರಿಯ ಪೊಲೀಸ್ ಅಧಿಕಾರಿ

ಬಿಎಸ್ಎಫ್ ಯೋಧ ರಮೀಜ್ ಪರ್ರಯ್ ಹತ್ಯೆ ಹಿಂದೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಶಂಕೆ ವ್ಯಕ್ತಪಡಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಂಡಿಪೋರಾ: ಬಿಎಸ್ಎಫ್ ಯೋಧ ರಮೀಜ್ ಪರ್ರಯ್ ಹತ್ಯೆ ಹಿಂದೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಶಂಕೆ ವ್ಯಕ್ತಪಡಿಸಿದ್ದಾರೆ. 
ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉತ್ತರ ಕಾಶ್ಮೀರದ ಪೊಲೀಸ್ ಅಧಿಕಾರಿ ನಿತೀಶ್ ಕುಮಾರ್ ಅವರು, ಯೋಧನ ಮನೆಗೆ ಒಟ್ಟು 3-4 ಉಗ್ರರು ನುಗ್ಗಿದ್ದಾರೆ, ಯೋಧನ ಮೇಲೆ ಉಗ್ರರು ಮೊದಲು ಚಾಕುವಿನಿಂದ ದಾಳಿ ಮಾಡಿದ್ದಾರೆ. ಬಳಿಕ ಗುಂಡುಗಳನ್ನು ಹಾರಿಸಿದ್ದಾರೆಂದು ಹೇಳಿದ್ದಾರೆ. 
ಪ್ರಾಥಮಿಕ ತನಿಖೆ ವೇಳೆ ಹತ್ಯೆ ಹಿಂದೆ ಲಷ್ಕರ್-ಇ-ತೊಯ್ಬಾ ಸಂಘಟನೆಯ ಮೊಹಮ್ಮದ್ ಭಾಯ್ ಮತ್ತು ಆತನ ಸಹಚರರು ಇರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. 
ರಜೆ ನಿಮಿತ್ತ ಕುಟುಂಬಸ್ಥರೊಂದಿಗೆ ಕಾಲ ಕಳೆಯುವ ಸಲುವಾರಿ ರಮೀಜ್ ಪರ್ರಯ್ ಅವರು ಬಂಡಿಪೋರ ಜಿಲ್ಲೆಯ ಹಜಿನ್ ಟೌನ್ ನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಈ ವೇಳೆ ರಮೀಜ್ ಅವರ ಮನೆಗೆ ನುಗ್ಗಿದ ಉಗ್ರರು ದಾಳಿ ನಡೆಸಿದ್ದರು. ಉಗ್ರ ದಾಳಿಗೆ ಯೋಧ ರಮೀಜ್ ಅವರು ಹುತಾತ್ಮರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com