ಒಂದೇ ದಿನ ರಾಜ್ಯಸಭೆ ಕಲಾಪ 11 ಬಾರಿ ಮುಂದೂಡಿಕೆ; ಇದು ನಮ್ಮ ಸಂಸದರ ದಾಖಲೆ!

ಒಂದೆಡೆ ತಮಿಳುನಾಡು ಸಂಸದರ ಕಾವೇರಿ ಗಲಾಟೆ ಮತ್ತೊಂದೆಡೆ ಆಂಧ್ರ ಪ್ರದೇಶ ಸಂಸದರ ವಿಶೇಷ ಸ್ಥಾನಮಾನ ಗದ್ದಲದಿಂದಾಗಿ 23 ದಿನಗಳ ಸಂಸತ್ ಕಲಾಪ ಯಾವುದೇ ರೀತಿಯ ಚರ್ಚೆಯೂ ಇಲ್ಲದೆ ವ್ಯರ್ಥವಾಗಿದ್ದು. ಸಂಸತ್ ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವಲ್ಲಿಯೂ ನಮ್ಮ ಸಂಸದರು ದಾಖಲೆ ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಒಂದೆಡೆ ತಮಿಳುನಾಡು ಸಂಸದರ ಕಾವೇರಿ ಗಲಾಟೆ ಮತ್ತೊಂದೆಡೆ ಆಂಧ್ರ ಪ್ರದೇಶ ಸಂಸದರ ವಿಶೇಷ ಸ್ಥಾನಮಾನ ಗದ್ದಲದಿಂದಾಗಿ 23 ದಿನಗಳ ಸಂಸತ್ ಕಲಾಪ ಯಾವುದೇ ರೀತಿಯ ಚರ್ಚೆಯೂ ಇಲ್ಲದೆ ವ್ಯರ್ಥವಾಗಿದ್ದು. ಸಂಸತ್ ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವಲ್ಲಿಯೂ ನಮ್ಮ ಸಂಸದರು ದಾಖಲೆ ಬರೆದಿದ್ದಾರೆ.
ಹೌದು..ಭ್ರಷ್ಟಾಚಾರ ನಿಗ್ರಹ ಮಸೂದೆಯನ್ನು ಅಂಗೀಕರಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ನಡೆದ ತಿಕ್ಕಾಟದ ಮಧ್ಯೆಯೇ ಕಲಾಪ ಒಂದೇ ದಿನದಲ್ಲಿ 11 ಬಾರಿ ಮುಂದೂಡಲ್ಪಟ್ಟ ಅಭೂತಪೂರ್ವ ವಿದ್ಯಮಾನಕ್ಕೆ ರಾಜ್ಯಸಭೆ ಸಾಕ್ಷಿಯಾಯಿತು. ಬೆಳಗ್ಗೆ 11ಕ್ಕೆ ಸದನ ಸಮಾವೇಶಗೊಂಡಾಗ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಾಗ ಸಭಾಧ್ಯಕ್ಷ ವೆಂಕಯ್ಯ ನಾಯ್ಡುಕಲಾಪವನ್ನು 20 ನಿಮಿಷ ಮುಂದೂಡಿದರು. 
ಆ ಬಳಿಕ ಸದಸ್ಯರ ಗದ್ದಲ ಮುಂದುವರಿದಾಗ ಮಧ್ಯಾಹ್ನ 2:00 ಗಂಟೆಯವರೆಗೆ ಮತ್ತೆ 10 ಬಾರಿ ಸದನದ ಕಲಾಪವನ್ನು ಮುಂದೂಡಬೇಕಾಯಿತು. ಮಧ್ಯಾಹ್ನ ಸದನ ಸಮಾವೇಶಗೊಂಡಾಗ ಸದಸ್ಯರ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸದಸ್ಯರ ವರ್ತನೆಯನ್ನು ಟೀಕಿಸಿದರು. ಅಲ್ಲದೆ ಬಳಿಕ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ನರೇಂದ್ರ ಮೋದಿ ದಲಿತ ವಿರೋಧಿ: ವಿಪಕ್ಷಗಳಿಂದ ಪ್ರತಿಭಟನೆ
ಇದಕ್ಕೂ ಮೊದಲು ಕಾಂಗ್ರೆಸ್, ಎಐಎಡಿಎಂಕೆ, ಬಿಎಸ್ಪಿ, ಸಿಪಿಐಎಂ, ಎಎಪಿ, ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ‘ನರೇಂದ್ರ ಮೋದಿ ದಲಿತ ವಿರೋಧಿ’ ಎಂಬ ಭಿತ್ತಿಫಲಕ ಹಿಡಿದುಕೊಂಡು, ದಲಿತ ವಿರೋಧಿ ಸರಕಾರವನ್ನು ಸಹಿಸಲಾಗದು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ಗದ್ದಲದ ಮಧ್ಯೆಯೇ ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಮಸೂದೆ 2013ನ್ನು ಮಂಡಿಸಲು ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಸಚಿವ ಜಿತೇಂದ್ರ ಸಿಂಗ್‌ಗೆ ಸೂಚಿಸಿದರು. 
ಈ ಸಂದರ್ಭ ಮಸೂದೆಯ ಬಗ್ಗೆ ಚರ್ಚೆ ನಡೆಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಕಳೆದ ನಾಲ್ಕು ವರ್ಷಗಳಿಂದ ಈ ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈಗ ಸ್ಥಾಯಿ ಸಮಿತಿಯ ಗಮನಕ್ಕೆ ತಂದು ಮಸೂದೆ ಮಂಡಿಸಲಾಗಿದೆ. ಆದ್ದರಿಂದ ಚರ್ಚೆಯ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು. ಆದರೂ ಗದ್ದಲ ಮುಂದುವರಿದಾಗ ಅಂತಿಮವಾಗಿ ಸದನದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com