ಕಾವೇರಿ ವಿವಾದ: ಆಸ್ಪತ್ರೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದರು ಜಯಲಲಿತಾ; ತ.ನಾಡು ಮಾಜಿ ಮುಖ್ಯ ಕಾರ್ಯದರ್ಶಿ
ಅನಾರೋಗ್ಯಕ್ಕೀಡಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಮಲಗಿ ಕಾವೇರಿ ವಿಚಾರ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದರು ಎಂದು ತಮಿಳುನಾಡು ರಾಜ್ಯ ಮಾಜಿ ಮುಖ್ಯ ಕಾರ್ಯದರ್ಶಿ...
ಚೆನ್ನೈ; ಅನಾರೋಗ್ಯಕ್ಕೀಡಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಮಲಗಿ ಕಾವೇರಿ ವಿಚಾರ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದರು ಎಂದು ತಮಿಳುನಾಡು ರಾಜ್ಯ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ರಾಮಮೋಹನ್ ರಾವ್ ಅವರು ತನಿಖಾ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
ಅಪೋಲೋ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ ಜಯಲಲಿತಾ ಅವರು ಮಲಿಗಿಕೊಂಡೇ 2 ಗಂಟೆಗಳ ಕಾಲ ಕಾವೇರಿ ವಿಚಾರ ಸಂಬಂಧ ಮಾತುಕತೆ ನಡೆಸಿದ್ದರು. ಈ ವೇಳೆ ಭಾವನಾತ್ಮಕವಾಗಿ ಮಾತನಾಡಿ, ಕೆಲ ಸೂಚನೆಗಳನ್ನು ನೀಡಿದ್ದರು.
2016 ಸೆ.27ರಂದು ಸಂಜೆ 4 ರಿಂದ 6 ಗಂಟೆಯವರೆಗೂ ತಾವೂ ಸೇರಿದಂತೆ ಸರ್ಕಾರಿ ಕಾರ್ಯದರ್ಶಿಗಳಿಗೆ ಜಯಲಲಿತಾ ಸೂಚನೆ ನೀಡಿದ್ದರು ಎಂದು ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ಸಮಿತಿಯೊಂದರ ಮುಂದೆ ರಾಮ್ ಮೋಹನ್ ರಾವ್ ಅವರು ಹೇಳಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಯಾವ ನಿಲುವು ತಳೆಯಬೇಕು ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ವಾದ ಮಂಡಿಸಬೇಕು ಎದು ಜಯಲಲಿತಾ ಅವರು ನಮಗೆ ತಿಳಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಈ ಮೂಲಕ ಆಸ್ಪತ್ರೆಯಲ್ಲಿದ್ದ ವೇಳೆ ಅವರು ಸಂಪೂರ್ಣವಾಗಿ ಮಾತನಾಡುವ ಸ್ಥಿತಿಯಲ್ಲಿದ್ದು ಎಂಬುದು ಖಚಿತಪಡಿಸಿದ್ದಾರೆ.