ಖಲಿಸ್ತಾನ್ ವಿವಾದ; ಪಾಕ್ ರಾಯಭಾರಿಗೆ ಭಾರತ ಸಮನ್ಸ್

ಖಲಿಸ್ತಾನ್ ವಿವಾದವನ್ನು ಕೆಣಕಿದ ಪಾಕಿಸ್ತಾನದ ವಿರುದ್ಧ ಭಾರತ ತೀವ್ರವಾಗಿ ಪ್ರತಿಭಟಿಸಿದ್ದು, ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಖಲಿಸ್ತಾನ್ ವಿವಾದವನ್ನು ಕೆಣಕಿದ ಪಾಕಿಸ್ತಾನದ ವಿರುದ್ಧ ಭಾರತ ತೀವ್ರವಾಗಿ ಪ್ರತಿಭಟಿಸಿದ್ದು, ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದೆ. 
ಕೆಲ ದಿನಗಳ ಹಿಂದಷ್ಟೇ ಭಾರತದ 1,800 ಸಿಖ್ ಯಾತ್ರಿಕರು ಪಾಕಿಸ್ತನದಲ್ಲಿರುವ ಗುರುದ್ವಾರ ಪಂಜಾ ಸಾಹಿಬ್'ಗೆ ತೆರಳಿದ್ದರು. ಈ ವೇಳೆ ಭಾರತೀಯ ಪ್ರಜೆಗಳಿಗೆ ಪಾಕಿಸ್ತಾನದಲ್ಲಿರು ಭಾರತೀಯ ರಾಯಭಾರಿ ಅಧಿಕಾರಿಗಳ ಭೇಟಿಗೆ ನಿರಾಕರಿಸಲಾಗಿತ್ತು. ಅಲ್ಲದೆ, ಸಿಖ್ ಯಾತ್ರಿಕರಿಗೆ ದೊರಕಬೇಕಿದ್ದ ನೆರವಿಗೂ ಪಾಕಿಸ್ತಾನ ಅಡ್ಡಿಪಡಿಸಿತ್ತು. 
ಇದಲ್ಲದೆ, ಖಲಿಸ್ತಾನ ವಿವಾದ ಪ್ರಸಾಪ ಮಾಡಿದ್ದ ಪಾಕಿಸ್ತಾನ ಪ್ರಚೋದನಾತ್ಮಹ ಹೇಳಿಕೆ ನೀಡಿ, ಪೋಸ್ಟರ್ ಗಳನ್ನೂ ಪ್ರದರ್ಶಿಸಿತ್ತು. 
ಪಾಕಿಸ್ತಾನ ಈ ದುರ್ವರ್ತನೆಗೆ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿರುವ ಭಾರತ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯುಂಟು ಮಾಡುವ ಕೃತ್ಯಗಳನ್ನು ಕೂಡಲೇ ನಿಲ್ಲಿಸುವಂತೆ ಪಾಕಿಸ್ತಾನ ರಾಯಭಾರಿಗಳಿಗೆ ಸಮನ್ಸ್ ಜಾರಿಗೆ. 
ಭಾರತದಿಂದ ಸಿಖ್ ಯಾತ್ರಿಕರು ಗುರುದ್ವಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಖಲಿಸ್ತಾನ ವಿವಾದ ಕುರಿತು ಪ್ರಸ್ತಾಪ ಮಾಡಿರುವ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆಯೂ ಪಾಕಿಸ್ತಾನಕ್ಕೆ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com