ಭಾರತದಲ್ಲಿ ಮೌನಿ ಬಾಬಾ ಆಗುವ ಪ್ರಧಾನಿ ಮೋದಿ, ವಿದೇಶದಲ್ಲಿ ಮಾತ್ರ ಮಾತನಾಡುತ್ತಾರೆ: ಶಿವಸೇನೆ ಲೇವಡಿ

ಭಾರತದಲ್ಲಿ ಮೌನಿ ಬಾಬಾ ಆಗುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶೀ ಭೂಮಿಯಲ್ಲಿ ಹೆಚ್ಚು ಮಾತನಾಡುತ್ತಾರೆಂದು ಶಿವಸೇನೆ ಶನಿವಾರ ಲೇವಡಿ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಭಾರತದಲ್ಲಿ ಮೌನಿ ಬಾಬಾ ಆಗುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶೀ ಭೂಮಿಯಲ್ಲಿ ಹೆಚ್ಚು ಮಾತನಾಡುತ್ತಾರೆಂದು ಶಿವಸೇನೆ ಶನಿವಾರ ಲೇವಡಿ ಮಾಡಿದೆ. 
ತನ್ನ ಮುಖವಾಣಿಯ ಸಾಮ್ನಾದಲ್ಲಿ ಈ ಕುರಿತಂತೆ ಸಂಪಾದಕೀಯದಲ್ಲಿ ಬರೆದಿರುವ ಶಿವಸೇನೆ, ಪ್ರಧಾನಿ ಮೋದಿ ವಿರುದ್ದ ತೀವ್ರವಾಗಿ ಕಿಡಿಕಾರಿದೆ. 
ಸಹಸ್ರಾರು ಕೋಟಿ ಬ್ಯಾಂಕ್ ಸಾಲವನ್ನು ಸುಸ್ತಿ ಮಾಡಿ ಭಾರತದಿಂದ ಕಾಲ್ಕಿತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರು ಲಂಡನ್ನಲ್ಲಿ ಆಸರೆ ಪಡೆದಿರುವ ಹೊರತಾಗಿಯೂ ಅಲ್ಲಿ ಚೆನ್ನಾಗಿ ಭಾಷಣ ಮಾಡುವ ಮೋದಿಯವರು, ಅಲ್ಲಿಂದ ಈಗಿನ್ನು ಬರಿಗೈಯಲ್ಲಿ ಮರಳಿದ್ದಾರೆಂದು ಹೇಳಿಕೊಂಡಿದೆ. 
ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಬಗ್ಗೆ ಪ್ರಧಾನಿ ಮೋದಿಯವರಿಗೆ ತೀವ್ರ ಅಸಮಾಧಾನ ಇರಬಹುದು. ಆದರೆ, ಅವರು ವಿದೇಶಿ ನೆಲದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಮಾತನಾಡುವುದು ಸರಿಯಲ್ಲ. ಈ ರೀತಿ ಮಾಡುವುದು ಅವರ ಸ್ಥಾನಕ್ಕೆ ಗೌರವಕ್ಕೆ ಸರಿಯಲ್ಲ ಎಂದು ತಿಳಿಸಿದೆ. 
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿಯವರಿಗೆ ನೀವು ಹೆಚ್ಚು ಮಾತನಾಡಬೇಕು ಮತ್ತು ಸರಿಯಾದ ಸಮಯದಲ್ಲಿ ಸರಿಯಾದುದನ್ನು ಮಾತನಾಡಬೇಕೆಂದು ಸಲಹೆ ನೀಡಿದ್ದರು. ಹಿಂದೆ ಇದೇ ಸಲಹೆಯನ್ನು ಮೋದಿಯವರೂ ಆಗಿನ ಪ್ರಧಾನಿಯಾಗಿದ್ದ ಸಿಂಗ್ ಅವರಿಗೆ ನೀಡಿದ್ದರು . ಈಗ ಈ ಸಲಹೆ ಮೋದಿಯವರಿಗೆ ಅನ್ವಯವಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಭಾರತದಲ್ಲಿದ್ದಾಗ ಮೋದಿ ಮೌನಿ ಬಾಬಾ ಆಗಿರುತ್ತಾರೆ. ಆದರೆ, ವಿದೇಶೀ ನೆಲದಲ್ಲಿ ಹೆಚ್ಚು ಮಾತನಾಡುತ್ತಾರೆಂದು ಎಂದು ಹೇಳಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com