ಮೋದಿ-ಕ್ಸೀ ಜಿನ್ ಪಿಂಗ್
ಮೋದಿ-ಕ್ಸೀ ಜಿನ್ ಪಿಂಗ್

ಭಾರತ-ಚೀನಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಷ್ಟು ಪ್ರಬುದ್ಧ: ಚೀನಾ ವಿದೇಶಾಂಗ ಇಲಾಖೆ

ವುಹಾನ್ ನ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ- ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರೊಂದಿಗೆ ಫಲಪ್ರದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು, ಆರ್ಥಿಕತೆ, ವಾಣಿಜ್ಯ ಸೇರಿದಂತೆ ಹಲವು...
ಬೀಜಿಂಗ್: ವುಹಾನ್ ನ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ- ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರೊಂದಿಗೆ ಫಲಪ್ರದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು, ಆರ್ಥಿಕತೆ, ವಾಣಿಜ್ಯ ಸೇರಿದಂತೆ ಹಲವು ವಿಷಯಗಳು ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚೆಯಾಗಿದ್ದು, ಪ್ರಧಾನಿ ಮೋದಿ ಅವರ ಭೇಟಿ ಯಶಸ್ವಿಯಾಗಿತ್ತು.   
ಪ್ರಧಾನಿ ನರೇಂದ್ರ ಮೋದಿ ಚೀನಾ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ಭಾರತ-ಚೀನಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಷ್ಟು ಪ್ರಬುದ್ಧ ರಾಷ್ಟ್ರಗಳು ಎಂದು ಹೇಳಿಕೆ ನೀಡಿದೆ. 
ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ನಾಯಕರೂ ಕಾರ್ಯತಂತ್ರ ಸಂವಹನವನ್ನು ಮುಂದುವರೆಸಲು ತೀರ್ಮಾನಿಸಿದ್ದು, ಉಭಯ ದೇಶಗಳೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಪ್ರಬುದ್ಧತೆ ಹೊಂದಿವೆ ಎಂದು ಚೀನಾ ವಿದೇಶಾಂಗ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com