ಪೊಲೀಸ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ 'ಎಸ್​ಸಿ, ಎಸ್​ಟಿ' ಜಾತಿ ಗುರುತು: ಪಿಎಂಒ ತನಿಖೆಗೆ ಎನ್‌ಸಿಪಿ ಪಟ್ಟು

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಹಿನ್ನೆಲೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಎಸ್​ಸಿ, ಎಸ್​ಟಿ ಜಾತಿ ಗುರುತು ಹಾಕಿದ್ದನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭೋಪಾಲ್: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಹಿನ್ನೆಲೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಎಸ್​ಸಿ, ಎಸ್​ಟಿ ಜಾತಿ ಗುರುತು ಹಾಕಿದ್ದನ್ನು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ತೀವ್ರವಾಗಿ ಖಂಡಿಸಿದ್ದಾರೆ. 
ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು ಈ ಕುರಿತಂತೆ ಪ್ರಧಾನಮಂತ್ರಿ ಕಚೇರಿ ತನಿಖೆ ನಡೆಸಬೇಕು ಎಂದು ಶರದ್ ಪವಾರ್ ಅವರು ಆಗ್ರಹಿಸಿದ್ದಾರೆ. 
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು ಈ ವೇಳೆ ಹಾಜರಾಗಿದ್ದ ಆಕಾಂಕ್ಷಿಗಳ ಎದೆಯ ಮೇಲೆ ಆತನ ಜಾತಿ(ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ)ಯನ್ನು ಗುರುತು ಹಾಕಲಾಗಿತ್ತು. ಈ ಕುರಿತ ಚಿತ್ರಗಳು ಹಲವು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಈ ಘಟನೆ ಕುರಿತು ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕರಣ ಸಂಬಂಧ ಧಾರ್ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಸಿಂಗ್ ಅವರು ತನಿಖೆಗೆ ಆದೇಶಿಸಿದ್ದರು.  ನಿನ್ನೆ ಜಿಲ್ಲಾ ವೈದ್ಯಕೀಯ ಮಂಡಳಿ ಪೊಲೀಸ್ ಹುದ್ದೆ ಆಕಾಂಕ್ಷಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com