ಮಾನವ ಕಳ್ಳಸಾಗಣೆ: ದೆಹಲಿಯಲ್ಲಿ 39 ನೇಪಾಳಿ ಹುಡುಗಿಯರ ರಕ್ಷಣೆ

ರಾಜಧಾನಿ ದೆಹಲಿಯ ಪಹಾರ್ ಗಂಜ್ ಪ್ರದೇಶದಲ್ಲಿರುವ ಹೋಟೆಲ್ ಮೇಲೆ ದೆಹಲಿ ಮಹಿಳಾ ಆಯೋಗ ದಾಳಿ ನಡೆಸಿದ್ದು, 39 ನೇಪಾಳಿ ಹುಡುಗಿಯರನ್ನು ರಕ್ಷಣೆ ಮಾಡಿರುವುದಾಗಿ ಬುಧವಾರ ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಜಧಾನಿ ದೆಹಲಿಯ ಪಹಾರ್ ಗಂಜ್ ಪ್ರದೇಶದಲ್ಲಿರುವ ಹೋಟೆಲ್ ಮೇಲೆ ದೆಹಲಿ ಮಹಿಳಾ ಆಯೋಗ ದಾಳಿ ನಡೆಸಿದ್ದು, 39 ನೇಪಾಳಿ ಹುಡುಗಿಯರನ್ನು ರಕ್ಷಣೆ ಮಾಡಿರುವುದಾಗಿ ಬುಧವಾರ ತಿಳಿದುಬಂದಿದೆ. 
ದೆಹಲಿ ಪೊಲೀಸರು ಹಾಗೂ ಮಹಿಳಾ ಆಯೋಗ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, 39 ಯುವತಿಯರನ್ನು ರಕ್ಷಣೆ ಮಾಡಿದೆ. 
ಉದ್ಯೋಗ ಕೊಡಿಸುವ ಭರವಸೆಯೊಂದಿಗೆ ಯುವತಿಯರನ್ನು ದೆಹಲಿಗೆ ಕರೆ ತರಲಾಗಿತ್ತು. ನಂತರ ಹೋಟೆಲ್ ವೊಂದರಲ್ಲಿ ಕೂಡಿ ಹಾಕಲಾಗಿತ್ತು. ಗಲ್ಫ್ ರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲು ಯೋಜನೆ ರೂಪಿಸಿದ್ದರು. ಇದರಲ್ಲಿ ಕೆಲ ಯುವತಿಯರನ್ನು ಈಗಾಗಲೇ ಶ್ರೀಲಂಕಾಗೆ ಸಾಗಣೆ ಮಾಡಲಾಗಿತ್ತು. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್ ಹೇಳಿದ್ದಾರೆ.
ಕಳೆದ ಒಂದು ವಾರದಿಂದ ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳಿಂದ 73 ಯುವತಿಯನ್ನು ಮಾನವ ಕಳ್ಳಸಾಗಾಣೆ ಜಾಲದಿಂದ ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕಿದೆ. ಕೂಡಲರೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ. 
ಕಳೆದ ಜು.25 ರಂದೂ ಕೂಡ ಮುನಿರ್ಕಾ ಎಂಬ ಪ್ರದೇಶದಲ್ಲಿ 16 ನೇಪಾಳಿ ಯುವತಿಯರನ್ನು ರಕ್ಷಣೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com