ಹೌದು, ಅಚ್ಚರಿಯಾದರು ನಿಜ. ದೆಹಲಿ ಸರ್ಕಾರಿ ಶಾಲೆಯ ಈ ಫೋಟೋವನ್ನು ನೋಡಿ ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ಹೊಸ ಕಲ್ಪನೆಯ ಈ ಡೆಸ್ಕ್ ಗಳನ್ನು ನಮ್ಮ ಶಾಲೆಗೂ ಖರೀದಿಸಬೇಕು. ಅದರ ಬಗ್ಗೆ ಮಾಹಿತಿ ಕೊಡಿ ಎಂದು ನಿನ್ನೆ ತಮಗೆ ಕರೆ ಮಾಡಿ ಕೇಳಿಕೊಂಡಿರುವುದಾಗಿ ದೆಹಲಿ ಸರ್ಕಾರದ ಸಲಹೆಗಾರ್ತಿ ಆತಿಶಿ ಮರ್ಲೆನಾ ಅವರು ಟ್ವೀಟ್ ಮಾಡಿದ್ದಾರೆ.