ನೀರವ್‌ ಮೋದಿ ಗಡಿಪಾರು ಕೋರಿ ಬ್ರಿಟನ್ ಗೆ 'ಅಧಿಕೃತ ಅರ್ಜಿ' ಸಲ್ಲಿಸಿದ ಭಾರತ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಭಾರತ ಮೂಲದ ಆಭರಣ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅಧಿಕೃತ ಅರ್ಜಿ ಸಲ್ಲಿಕೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಭಾರತ ಮೂಲದ ಆಭರಣ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅಧಿಕೃತ ಅರ್ಜಿ ಸಲ್ಲಿಕೆ ಮಾಡಿದೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ ಕೆ ಸಿಂಗ್‌ ಅವರು, ಅರ್ಥಿಕ ಅಪರಾಧಿ ನೀರವ್‌ ಮೋದಿಯ ಗಡೀಪಾರಿಗೆ ಕೋರಿ ಬ್ರಿಟನ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
'ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಕೋರಿರುವ ಅರ್ಜಿಯನ್ನು ಗೃಹ ಇಲಾಖೆಯಿಂದ ವಿದೇಶಾಂಗ ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಬ್ರಿಟನ್ ನಿಂದ ನೀರವ್‌ ಮೋದಿಯನ್ನು ಗಡಿಪಾರು ಮಾಡಲು ಕೋರಲಾಗಿದೆ. ಇದೇ ವಿಚಾರವಾಗಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಿಕೊಂಡಲು ಬ್ರಿಟನ್‌ ಸರಕಾರಕ್ಕೆ ಈ ಮನವಿಯನ್ನು ರಾಯಭಾರ ಕಚೇರಿ ಮೂಲಕ ಕಳುಹಿಸಿಕೊಡಲಾಗಿದೆ' ಎಂದು ಸಿಂಗ್‌ ಹೇಳಿದ್ದಾರೆ.
ಅಂತೆಯೇ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಗೆ 13,500 ಕೋಟಿ ರೂ.ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ  ನೀರವ್‌ ಮೋದಿ ಒಬ್ಬ ವಜ್ರದ ವ್ಯಾಪಾರಿಯಾಗಿದ್ದು, ಆತನ ಸಹೋದರ ಸಂಬಂಧಿ ಮೇಹುಲ್‌ ಚೋಕ್ಸಿಯೊಂದಿಗೆ ಭಾರತದ ಮೋಸ್ಟ್‌ ವಾಂಟೆಡ್‌ ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ನೀರವ್ ನ ಪಾಸ್‌ಪೋರ್ಟ್‌ಅನ್ನು ವಿದೇಶಾಂಗ ಇಲಾಖೆ ವಜಾ ಮಾಡಿದೆ ಎಂದು ಸಿಂಗ್‌ ಇದೇ ವೇಳೆ ತಿಳಿಸಿದ್ದಾರೆ.
ಇನ್ನು ಮಾದ್ಯಮ ವರದಿಗಳ ಅನ್ವಯ, 'ನೀರವ್‌ ಮೋದಿ ಬಳಿ 12ಕ್ಕೂ ಹೆಚ್ಚು ಪಾಸ್ ಪೋರ್ಟ್‌ ಇವೆ ಎಂದು ಹೇಳಲಾಗಿದ್ದು, ಬ್ರಿಟನ್ ನಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಈ ಹಿಂದೆಯೇ ನೀರವ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್ ಜಾರಿ ಮಾಡಲಾಗಿದ್ದು, ಇದೀಗ ಅಧಿಕೃತವಾಗಿ ನೀರವ್ ಮೋದಿ ಗಡಿಪಾರಿಗೆ ಅರ್ಜಿ ಸಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com