ಥಾಣೆ: 21 ವರ್ಷದ ಯುವತಿಯನ್ನು ಹಾಡ ಹಗಲೇ ಇರಿದು ಕೊಂದ ಯುವಕ

21 ವರ್ಷದ ಯುವತಿಯನ್ನು ಯುವಕನೋರ್ವ ಹಾಡ ಹಗಲೇ ಇರಿದು ಹತ್ಯೆ ಮಾಡಿರುವ ಘಟನೆ ಥಾಣೆಯಲ್ಲಿ ನಡೆದಿದೆ.
ಥಾಣೆ: 21 ವರ್ಷದ ಯುವತಿಯನ್ನು ಹಾಡ ಹಗಲೇ ಇರಿದು ಕೊಂದ ಯುವಕ
ಥಾಣೆ: 21 ವರ್ಷದ ಯುವತಿಯನ್ನು ಹಾಡ ಹಗಲೇ ಇರಿದು ಕೊಂದ ಯುವಕ
Updated on: 
ಥಾಣೆ: 21 ವರ್ಷದ ಯುವತಿಯನ್ನು ಯುವಕನೋರ್ವ ಹಾಡ ಹಗಲೇ ಇರಿದು ಹತ್ಯೆ ಮಾಡಿರುವ ಘಟನೆ ಥಾಣೆಯಲ್ಲಿ ನಡೆದಿದೆ. 
ಬೆಳಿಗ್ಗೆ 10:30 ಕ್ಕೆ ಮರ್ಫಿ ಆರ್ ಟಿಒ ಕಚೇರಿ ಪ್ರದೇಶದಲ್ಲಿ ಈ ಘಟನೆ  ನಡೆದಿದ್ದು, ಪ್ರಾಚಿ ಝೇಡ್ ಮೃತ ದುರ್ದೈವಿಯಾಗಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.  ಹತ್ಯೆ ಮಾಡಿರುವ ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಯುವತಿಗೆ ಹಲವು ಬಾರಿ ಇರಿದಿದ್ದು ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಘಟನೆಯ ಹಿಂದಿನ ಉದ್ದೇಶ ಇನ್ನಷ್ಟೇ ತಿಳಿಯಬೇಕಿದ್ದು, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಪ್ರೇಮದ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರಬಹುದಾದ ಘಟನೆ ಎಂದು ಹೇಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com