ಭಾರತಕ್ಕೆ ಚೀನಾ ರಕ್ಷಣಾ ಸಚಿವ ವೈ ಫೆಂಗ್ ಭೇಟಿ; ಡೊಕ್ಲಾಮ್ ಸೇರಿ ಮಹತ್ವದ ವಿಚಾರಗಳ ಕುರಿತು ಚರ್ಚೆ!

ಚೀನಾ ರಕ್ಷಣಾ ಸಚಿವ ವೈ ಫೆಂಗ್ ಭಾರತ ಭೇಟಿ ಖಚಿತವಾದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸೇನಾ ಸಮಸ್ಯೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಗರಿಗೆದರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಚೀನಾ ರಕ್ಷಣಾ ಸಚಿವ ವೈ ಫೆಂಗ್ ಭಾರತ ಭೇಟಿ ಖಚಿತವಾದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸೇನಾ ಸಮಸ್ಯೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಗರಿಗೆದರಿದೆ.
ಪ್ರಮುಖವಾಗಿ ಉಭಯ ದೇಶಗಳಿಗೂ ತಲೆನೋವಾಗಿ ಕಾಡುತ್ತಿರುವ ಡೊಕ್ಲಾಂ ಗಡಿ ವಿವಾದ, ಅಂತೆಯೇ ಗಡಿ ಭಾಗದಲ್ಲಿನ ಹಾಟ್ ಲೈನ್ (ಸೇನಾ ಸಮಸ್ಯೆಗಳ ಪರಿಹಾರಕ್ಕಾಗಿ ಉದ್ದೇಶಿತ ಸಂಧಾನ ಕೇಂದ್ರ)ರಚನೆ ವಿಚಾರಗಳು ವೈ ಫೆಂಗ್ ಭೇಟಿ ವೇಳೆ ಚರ್ಚೆಗೆ ಬರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ವೆೈ ಫೆಂಗ್ ಇದೇ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನುಈಗಾಗಲೇ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಡೊಕ್ಲಾಂ ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಶೀಥಲ ಸಮರ ಮುಂದವರೆದಿದ್ದು, ಇದಲ್ಲದೇ ರಾಜಕೀಯವಾಗಿಯೂ ಡೊಕ್ಲಾಂ ವಿಚಾರ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್ನು ಉಭಯ ದೇಶಗಳ ನಡುವಿನ ಸೇನಾ ಬಿಕ್ಕಟ್ಟು ಶಮನಕ್ಕಾಗಿ ಈ ಹಿಂದೆ ಯೋಜಿಸಿದ್ದ ಬಿಕ್ಕಟ್ಟು ಸಂಧಾನ ಕೇಂದ್ರ ರಚನೆಗೆ ಎದುರಾಗಿರುವ ಭಾಷಾಂತರಕಾರರ ಕೊರತೆ ಕುರಿತೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಇದೇ ಕಾರಣಕ್ಕೆ ಚೀನಾ ರಕ್ಷಣಾ ಸಚಿವ ವೈ ಫೆಂಗ್ ರ ಭೇಟಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com