ಕಾಂಗ್ರೆಸ್ ಸಂಸದ ಚರಣ್ ದಾಸ್ ಮೊಹಂತ್
ಕಾಂಗ್ರೆಸ್ ಸಂಸದ ಚರಣ್ ದಾಸ್ ಮೊಹಂತ್

ಎನ್ಆರ್'ಸಿ ಕರಡು ವಿವಾದ: ಭಾರತ ಎಲ್ಲರಿಗೂ ಆಶ್ರಯ ನೀಡುತ್ತದೆ; ಕಾಂಗ್ರೆಸ್ ಸಂಸದ

ದೇಶದಲ್ಲಿ ಆಶ್ರಯ ಅರಸಿ ಬರುವ ಪ್ರತೀಯೊಬ್ಬರನ್ನೂ ಭಾರತ ಸ್ವಾಗತಿಸುತ್ತದೆ ಎಂದು ಕಾಂಗ್ರೆಸ್ ಸಂಸದ ಚರಣ್ ದಾಸ್ ಮೊಹಂತ್ ಅವರು ಭಾನುವಾರ ಹೇಳಿದ್ದಾರೆ...
Published on
ಕೊರ್ಬಾ (ಛತ್ತೀಸ್ಗಢ): ದೇಶದಲ್ಲಿ ಆಶ್ರಯ ಅರಸಿ ಬರುವ ಪ್ರತೀಯೊಬ್ಬರನ್ನೂ ಭಾರತ ಸ್ವಾಗತಿಸುತ್ತದೆ ಎಂದು ಕಾಂಗ್ರೆಸ್ ಸಂಸದ ಚರಣ್ ದಾಸ್ ಮೊಹಂತ್ ಅವರು ಭಾನುವಾರ ಹೇಳಿದ್ದಾರೆ. 
ಅಸ್ಸಾಂ ಎನ್ಆರ್'ಸಿ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿಯೇ ಆಗಲೀ ಅಥವಾ ಅದಕ್ಕೂ ಹಿಂದೆಯೇ ಆಗಲಿ, ಆಶ್ರಯ ಅರಸಿಕೊಂಡು ಬರುವವರನ್ನು ಭಾರತ ಎಂದಿಗೂ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. 
ಆಶ್ರಯ ಅರಸಿಕೊಂಡು ಭಾರತಕ್ಕೆ ಬರುವವರನ್ನು ನಾವೆಂದಿಗೂ ಹಿಂದಕ್ಕೆ ತಳ್ಳಿಲ್ಲ. ಇದು ನನ್ನ ಅಭಿಪ್ರಾಯವಾಗಿದೆ. ಕೆಲವರು ದೇಶಕ್ಕೆ ಅತಿಥಿಗಳಾಗಿ ಬಂದರೆ, ಇನ್ನೂ ಕೆಲ ಬಡವರು ಆಶ್ರಯ ಅರಸಿ ಬರುತ್ತಾರೆ. ಅಂತಹವರನ್ನು ನಾವು ದೇಶದಲ್ಲಿಟ್ಟುಕೊಳ್ಳಬೇಕು. ಅವರಿಗೆ ಭದ್ರತೆ ಹಾಗೂ ಸುರಕ್ಷತೆಗಳನ್ನು ನೀಡಬೇಕೆಂದು ತಿಳಿಸಿದ್ದಾರೆ. 

X

Advertisement

X
Kannada Prabha
www.kannadaprabha.com