ಛತ್ತೀಸ್ ಗಢ​ ಗವರ್ನರ್​ ಬಲರಾಮ್ ಜಿ ದಾಸ್ ಟಂಡನ್ ನಿಧನ

ಛತ್ತೀಸ್ ​ಗಢ ಗವರ್ನರ್​ ಬಲರಾಮ್ ಜಿ ದಾಸ್​ ಟಂಡನ್​ ಅವರು ಮಂಗಳವಾರ ಹೃದಯಾಘಾತದಿಂದ...
ಬಲರಾಮ್ ಜಿ ದಾಸ್ ಟಂಡನ್
ಬಲರಾಮ್ ಜಿ ದಾಸ್ ಟಂಡನ್
Updated on: 
ರಾಯ​ಪುರ್​: ಛತ್ತೀಸ್ ​ಗಢ ಗವರ್ನರ್​ ಬಲರಾಮ್ ಜಿ ದಾಸ್​ ಟಂಡನ್​ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
90 ವರ್ಷದ ಟಂಡನ್ ಅವರಿಗೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರಾಯ​ಪುರದ ಡಾ.ಬಿಆರ್ ಅಂಬೇಡ್ಕರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಗವರ್ನರ್ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈಸ್ವಾಲ್ ಅವರು ಹೇಳಿದ್ದಾರೆ.
ಜನಸಂಘ(ನಂತರ ಭಾರತೀಯ ಜನತಾ ಪಕ್ಷವಾಯಿತು) ಸಂಸ್ಥಾಪಕರಲ್ಲಿ ಬಲರಾಮ್ ಜಿ ದಾಸ್ ಟಂಡನ್ ಅವರು ಒಬ್ಬರಾಗಿದ್ದು, 2014ರ ಜುಲೈನಲ್ಲಿ ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಟಂಡನ್ ಅವರು ಪಂಜಾಬ್ ನ ಉಪ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com