ಮಹಿಳೆಯ ನಗ್ನ ಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿ ಹೇಯ ಕೃತ್ಯ

ಯುವಕನ ಕೊಲೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ನಗ್ನ ಗೊಳಿಸಿ ಮೆರವಣಿಗೆ ಮಾಡಿ, ಅಮಾನವೀಯವಾಗಿ ಥಳಿಸಿರುವ ಘಟನೆ ಬಿಹಾರದ ಬೋಜಪುರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇದುವರೆಗೂ 15 ಮಂದಿಯ...
ಲಕನ ಶವ ಪತ್ತೆಯಾದ ಬಳಿಕ ಭುಗಿಲೆದ್ದಿ   ಹಿಂಸಾಚಾರ
ಲಕನ ಶವ ಪತ್ತೆಯಾದ ಬಳಿಕ ಭುಗಿಲೆದ್ದಿ ಹಿಂಸಾಚಾರ
Updated on: 
ಪಾಟ್ನಾ: ಯುವಕನ ಕೊಲೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ನಗ್ನ ಗೊಳಿಸಿ ಮೆರವಣಿಗೆ ಮಾಡಿ, ಅಮಾನವೀಯವಾಗಿ ಥಳಿಸಿರುವ ಘಟನೆ ಬಿಹಾರದ ಬೋಜಪುರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇದುವರೆಗೂ 15 ಮಂದಿಯನ್ನು ಬಂಧಿಸಲಾಗಿದೆ. 
ವಿಮಲೇಶ್ ಎಂಬ 19 ವರ್ಷದ ಯುವಕ ಭಾನುವಾರದಿಂದ ನಾಪತ್ತೆಯಾಗಿದ್ದ, ಸೋಮವಾರ ಬೆಳಗ್ಗೆ ಸಮೀಪದ ರೈಲ್ವೆ ಹಳಿಗಳ ಮೇಲೆ ಮೃತ ದೇಹ ಪತ್ತೆಯಾಗಿದೆ.ಬಾಲಕನ ಶವ ಪತ್ತೆಯಾದ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು ಕಂಡ ಕಂಡ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು , ಪ್ರಯಾಣಿಕರ ರೈಲುಗಳಿಗೂ ಕಲ್ಲು ತೂರಾಟ ನಡೆಸಲಾಗಿದೆ. 
ಭಾನುವಾರ ಯುವಕ ಮಹಿಳೆಯೊಂದಿಗೆ ಇದ್ದ ಎನ್ನಲಾಗಿದ್ದು, ಯುವಕನ ಹತ್ಯೆಗೆ ಮಹಿಳೆ ಕಾರಣವಾಗಿದ್ದಾಳೆ ಎನ್ನುವ ಶಂಕೆಯಲ್ಲಿ ಆಕೆಯನ್ನು ನೂರಾರು ಉದ್ರಿಕ್ತರು ಎಳೆದೊಯ್ದು ನಗ್ನ ಗೊಳಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿ ಥಳಿಸಿದ್ದಾರೆ. 
ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.ಘಟನೆಯ ಕುರಿತು ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ  ವಿಶೇಷ ಪೊಲೀಸ್‌ ಅಧಿಕಾರಿ ಸೇರಿದಂತೆ 8 ಮಂದಿಯನ್ನು ಸರ್ಕಾರ ಅಮಾನತುಗೊಳಿಸಿದ್ದು , ಸಮಗ್ರ ತನಿಖೆಗೆ ಆದೇಶಿಸಿದೆ. ಹಿಂಸಾಚಾರ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com