ಟೆರೇಸ್ ಮೇಲೆ ಕಾಪ್ಟರ್: ಸಣ್ಣ ತಪ್ಪಾಗಿದ್ದರೂ ಹೆಲಿಕಾಪ್ಟರ್ ಪುಡಿಪುಡಿ, ಪೈಲಟ್ ಬಿಚ್ಚಿಟ್ಟ ಸತ್ಯವಿದು!

ಪ್ರವಾಹಕ್ಕೆ ಸಿಲುಕಿದ್ದ ಕೇರಳದ ಮನೆಯೊಂದರ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್ ಇಳಿಸಿ ಸಂತ್ರಸ್ತರನ್ನು ರಕ್ಷಿಸುವಾಗ ಸಣ್ಣ ತಪ್ಪಾಗಿದ್ದರೂ ಮೂರು ಸೆಕೆಂಡ್ ಗಳಲ್ಲಿ ಹೆಲಿಕಾಪ್ಟರ್ ಪುಡಿಪುಡಿಯಾಗುತ್ತಿತ್ತು...
ಟೆರೇಸ್ ಮೇಲೆ ಕಾಪ್ಟರ್; ಸಣ್ಣ ತಪ್ಪಾಗಿದ್ದರೂ 3 ಸೆಕೆಂಡ್'ಗಳಲ್ಲಿ ಹೆಲಿಕಾಪ್ಟರ್ ಪುಡಿಪುಡಿಯಾಗುತ್ತಿತ್ತು, ಪೈಲಟ್ ಬಿಚ್ಚಿಟ್ಟ ಸತ್ಯವಿದು!
ಟೆರೇಸ್ ಮೇಲೆ ಕಾಪ್ಟರ್; ಸಣ್ಣ ತಪ್ಪಾಗಿದ್ದರೂ 3 ಸೆಕೆಂಡ್'ಗಳಲ್ಲಿ ಹೆಲಿಕಾಪ್ಟರ್ ಪುಡಿಪುಡಿಯಾಗುತ್ತಿತ್ತು, ಪೈಲಟ್ ಬಿಚ್ಚಿಟ್ಟ ಸತ್ಯವಿದು!
Updated on
ಮುಂಬೈ: ಪ್ರವಾಹಕ್ಕೆ ಸಿಲುಕಿದ್ದ ಕೇರಳದ ಮನೆಯೊಂದರ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್ ಇಳಿಸಿ ಸಂತ್ರಸ್ತರನ್ನು ರಕ್ಷಿಸುವಾಗ ಸಣ್ಣ ತಪ್ಪಾಗಿದ್ದರೂ ಮೂರು ಸೆಕೆಂಡ್ ಗಳಲ್ಲಿ ಹೆಲಿಕಾಪ್ಟರ್ ಪುಡಿಪುಡಿಯಾಗುತ್ತಿತ್ತು!
ಹೌದು, ಕೇರಳದ ಚಾಲಕುಡಿ ಪಟ್ಟಣದಲ್ಲಿ ಮನೆಯ ಟೆರೇಸ್ ಮೇಲೆ ಹೆಲಿಕಾಪ್ಟರ್ ಇಳಿಸಿ 26 ಮಂದಿಯನ್ನು ರಕ್ಷಣೆ ಘಟನೆಯನ್ನು ಪೈಲಟ್ ಹೀಗೆ ವಿವರಿಸಿದ್ದಾರೆ. 
ಮನೆಯಮೇಲೆ ಸಂಪೂರ್ಣ ಭಾರ ಹಾಕದೇ ಬಹುತೇಕ ಭಾರ ಗಾಳಿಯಲ್ಲಿ ಇರುವಂತೆ ನೋಡಿಕೊಳ್ಳಲಾಗಿತ್ತು. ತಾಂತ್ರಿಕವಾಗಿ ಇದನ್ನು ಲೈಟ್ ಆನ್ ವೀಲ್ಹ್ಸ್ ಎಂದು ಕರೆಯಲಾಗುತ್ತದೆ ಈ ಪ್ರಕ್ರಿಯೆಯ ಮೂಲಕ ಹೆಲಿಕಾಪ್ಟರ್ ಅನ್ನು ಟೆರೇಸ್ ಮೇಲೆ ಇಳಿಸುವ ನಿರ್ಧಾರ ಕೈಗೊಂಡೆ ಎಂದು ಲೆ.ಕಮಾಂಡರ್ ಅಭಿಜಿತ್ ಗರುಡ್ ಹೇಳಿದ್ದಾರೆ. 
ನಾಲ್ವರನ್ನು ಹಗ್ಗದ ಮೂಲಕ ಹೆಲಿಕಾಪ್ಟರ್'ಗೆ ಹತ್ತಿಸಿಕೊಂಡ ಬಳಿಕ ಉಳಿದ 22 ಮಂದಿಯನ್ನು ಒಳಕ್ಕೆ ಕರೆದುಕೊಳ್ಳುವುದು ಸವಾಲಿನ ವಿಷಯವಾಗಿತ್ತು. ಹೆಲಿಕಾಪ್ಟರ್ ಸಿಬ್ಬಂದಿ ಕೆಳಗಿಳಿದು ಎಲ್ಲರನ್ನೂ ಹೆಲಿಕಾಪ್ಟರ್'ಗೆ ಹತ್ತಿಸಿದರು. ಸಿಬ್ಬಂದಿಯ ಸಹಕಾರ ಇಲ್ಲದೇ ಇದ್ದಿದ್ದರೆ ಇದು ಸಾಧ್ಯವಾಗುತ್ತಲೇ ಇರಲಿಲ್ಲ. ಒಂದು ವೇಳೆ ಸ್ವಲ್ಪವೇ ಪ್ರಮಾದವಾಗಿದ್ದರೂ ಮೂರು ಸೆಕೆಂಡ್'ಗಳಲ್ಲಿ ಹೆಲಿಕಾಪ್ಟರ್ ಪುಡಿ ಪುಡಿಯಾಗುತ್ತಿತ್ತು ಎಂದು ತಿಳಿಸಿದ್ದಾರೆ. 
ಇದೊಂದು ಅತ್ಯಂತ ಕಠಿಣ ನಿರ್ಧಾರವಾಗಿದ್ದು, ಉತ್ತಮ ನಿರ್ಧಾರ ತೆಗೆದುಕೊಂಡಿದ್ದಕೆಕ ಸಂತೋಷವಿದೆ. ಒಬ್ಬ ಉತ್ತಮ ಪೈಲಟ್ ಆಗಿ ಕೆಲವೊಮ್ಮೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಕಾರ್ಯಾಚರಣೆ ನಡೆಸುತ್ತಿದ್ದಾಗ 20-25 ಜನರನ್ನು ನೋಡಿದ್ದೆವು. ಈವೇಳೆ ಮಹಿಳೆಯೊಬ್ಬು ವೀಲ್'ಚೇರ್ ನಲ್ಲಿ ಬಂದಿದ್ರು. ಆಕೆಗೆ ಹೆಲಿಕಾಪ್ಟರ್ ಹತ್ತಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಕಾರ್ಯಾಚರಣೆಯ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com