ಅಲಹಾಬಾದ್: ಒಂದೇ ಕುಟುಂಬದ ಐವರು ಮನೆಯೊಳಗೆ ಶವಗಳಾಗಿ ಪತ್ತೆಯಾಗಿರುವ ಘಟನೆ ಧೂಮ್‌ಗಂಜ್ ನಡೆದಿದೆ.
ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿದ್ದು ತಂದೆ ಮತ್ತೊಂದು ಕೊಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ನಡೆದಿದೆ,
ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಭಯಾನಕ ದೃಶ್ಯ ನೋಡಿ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಹೆಂಡತಿ ಹಾಗೂ ಮೀನರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಂದು ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ,.
ಅಲಹಾಬಾದ್‌ನ ಹಿರಿಯ ಎಸ್‌ಪಿ ನಿತಿನ್ ತಿವಾರಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪತಿಯೇ ನಾಲ್ವರನ್ನು ಹತ್ಯೆಗೈದು ಆತ್ಮಹತ್ಯೆಗೈದಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.