ನವದೆಹಲಿ: ಪ್ರವಾಹ ಪೀಡಿತ ಕೇರಳಕ್ಕೆ ನೀಡಿದ್ದ ವಿದೇಶಿ ಆರ್ಥಿಕ ನೆರವನ್ನು ಭಾರತ ತಿರಸ್ಕರಿಸಿದೆ ಎಂದು ಭಾರತದಲ್ಲಿರುವ ಥಾಯ್ಲ್ಯಾಂಡ್ ರಾಯಭಾರಿ ಚುಟಿನ್ಟಾರ್ನ್ ಸ್ಯಾಮ್ ಗೊನ್ಸಕ್ಡಿ ಅವರು ಹೇಳಿದ್ದಾರೆ.
ಕೇರಳ ಪ್ರವಾಹ ಪರಿಹಾರಕ್ಕಾಗಿ ಭಾರತ ಸರ್ಕಾರ ವಿದೇಶಿ ಆರ್ಥಿಕ ನೆರವನ್ನು ಸ್ವೀಕರಿಸದಿರುವುದಕ್ಕೆ ಅನೌಪಚಾರಿಕವಾಗಿ ವಿಷಾದಿಸುತ್ತೇನೆ ಮತ್ತು ನಮ್ಮ ಹೃದಯ ಭಾರತೀಯರೊಂದಿಗೆ ಇವೆ ಎಂದು ಚುಟಿನ್ಟಾರ್ನ್ ಅವರು ಟ್ವೀಟ್ ಮಾಡಿದ್ದಾರೆ.
ಕೇರಳ ಪ್ರವಾಹ ಪೀಡಿತರಿಗೆ ದೇಶ-ವಿದೇಶಗಳಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ. ಆದ್ರೆ ವಿದೇಶಿ ನೆರವನ್ನು ಭಾರತ ನಿರಾಕರಿಸುವ ಸಾಧ್ಯತೆ ಇದೆ. ಕೇರಳ ಪ್ರವಾಹದ ನಂತರ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಯುಎಇ, ಥಾಯ್ಲ್ಯಾಂಡ್, ಕತಾರ್ ಹಾಗೂ ಮಾಲ್ಡೀವ್ಸ್ ರಾಜ್ಯಗಳು ಸಹಾಯ ಮಾಡಲು ಮುಂದೆ ಬಂದಿವೆ.
ಉನ್ನತ ಮೂಲಗಳ ಪ್ರಕಾರ, ಭಾರತ ವಿದೇಶದ ಸಹಾಯ ನಿರಾಕರಿಸಲಿದೆಯಂತೆ. ನೆರವಿಗೆ ಮುಂದೆ ಬಂದ ದೇಶಗಳಿಗೆ ಕೃತಜ್ಞತೆ ಸಲ್ಲಿಸಿರುವ ಭಾರತ ತನ್ನ ಸಂಪನ್ಮೂಲ ಬಳಸಿಕೊಂಡು ಕೇರಳ ಪುನರ್ ನಿರ್ಮಾಣ ಕಾರ್ಯ ಮಾಡಲಿದೆಯಂತೆ. ಭಾರತದಲ್ಲಿರುವ ಸಂಪನ್ಮೂಲ ಕೇರಳ ಪುನರ್ ನಿರ್ಮಾಣಕ್ಕೆ ಸಾಕು ಎಂಬುದು ಭಾರತದ ಅಭಿಪ್ರಾಯವಾಗಿದೆ.