ಅಪಲ್ ಕಂಪನಿಯಿಂದ ಕೇರಳಕ್ಕೆ 7 ಕೋಟಿ ರೂ. ನೆರವು :ಆಪ್ ಸ್ಟೋರ್, ಐಟ್ಯೂನ್ ನಲ್ಲಿ "ಡೊನೇಟ್" ಬಟನ್ ಸೇರಿಕೆ

ವಿನಾಶಕಾರಿ ಪ್ರವಾಹದಿಂದ ಜರ್ಝರಿತಗೊಂಡಿರುವ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಕ್ಕಾಗಿ ಅಮೆರಿಕಾದ ದೈತ್ಯ ಸಾಪ್ಟ್ ವೇರ್ ಕಂಪನಿ ಅಪಲ್ ಕಂಪನಿ 7 ಕೋಟಿ ರೂಪಾಯಿ ನೆರವು ಘೋಷಿಸಿದೆ.
ಕೇರಳ ಪ್ರವಾಹ
ಕೇರಳ ಪ್ರವಾಹ
Updated on: 
ಕೊಚ್ಚಿ :ವಿನಾಶಕಾರಿ ಪ್ರವಾಹದಿಂದ ಜರ್ಝರಿತಗೊಂಡಿರುವ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಕ್ಕಾಗಿ  ಅಮೆರಿಕಾದ ದೈತ್ಯ ಸಾಪ್ಟ್ ವೇರ್ ಕಂಪನಿ   ಅಪಲ್   ಕಂಪನಿ 7 ಕೋಟಿ ರೂಪಾಯಿ ನೆರವು ಘೋಷಿಸಿದೆ.
ಪ್ರವಾಹದ ಸಂತ್ರಸ್ತರಿಗೆ ನೆರವು ನೀಡಲು  ಹಾಗೂ ಮನೆ, ಶಾಲೆಗಳನ್ನು ಪುನರ್ ನಿರ್ಮಾಣ ಮಾಡಲು ಭಾರತದ ಮರ್ಸಿ ಕಾರ್ಪೋರೇಷನ್ ಹಾಗೂ  ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ   7 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ ಎಂದು ಕ್ಯುಪರ್ಟಿನೊ ಮೂಲದ ಐಫೋನ್ ಮೇಕರ್  ಹೇಳಿಕೆಯಲ್ಲಿ ತಿಳಿಸಿದೆ.
ಆಪ್ ಸ್ಟೋರ್,  ಐಟ್ಯೂನ್ ನಲ್ಲಿ  "ಡೊನೇಟ್"  ಬಟನ್ ಸೇರಿಸಲಾಗಿದ್ದು, ಹೋಮ್ ಪೇಜ್   ಬ್ಯಾನರ್ ನಲ್ಲಿ   ಪ್ರವಾಹ ಸಂತ್ರಸ್ತರಿಗೆ ನೆರವನ್ನು ಬೆಂಬಲಿಸುತ್ತಿದೆ.ಆಪ್ ಸ್ಟೋರ್ , ಐಟ್ಯೂನ್ ನಲ್ಲಿ  "ಡೊನೇಟ್"  ಬಟನ್ ಸೇರಿಸಲಾಗಿದ್ದು, ಮರ್ಸಿ ಕಾರ್ಪೋರೇಷನ್ ಗೆ ಗ್ರಾಹಕರು ನೆರವು ನೀಡುವಂತೆ ಹೇಳಲಾಗುತ್ತಿದೆ ಎಂದು ಅಪಲ್ ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com