ಭೀಮಾ ಕೋರೆಗಾಂವ್: ನಕ್ಸಲ್ ಸಂಪರ್ಕದ ಶಂಕೆ, ದೇಶದ ಹಲವೆಡೆ ಹೋರಾಟಗಾರರ ನಿವಾಸಗಳ ಮೇಲೆ ದಾಳಿ

ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದಾಗಿ ದೇಶದ ಹಲವೆಡೆ ಇಂದು ಪ್ರಸಿದ್ಧ ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದ್ರಾಬಾದಿನಲ್ಲಿ ವರವರ ರಾವ್  ನಿವಾಸದ ಹೊರಗಿನ ಚಿತ್ರ
ಹೈದ್ರಾಬಾದಿನಲ್ಲಿ ವರವರ ರಾವ್ ನಿವಾಸದ ಹೊರಗಿನ ಚಿತ್ರ
Updated on

ಪುಣೆ: ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದಾಗಿ ದೇಶದ ಹಲವೆಡೆ ಇಂದು ಪ್ರಸಿದ್ಧ  ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು  ಪೊಲೀಸರು  ತಿಳಿಸಿದ್ದಾರೆ.

ಕಳೆದ ವರ್ಷ ಪುಣೆಯಲ್ಲಿ ನಡೆದ ಭೀಮಾ ಕೋರೆ ಗಾಂವ್ ಹಿಂಸಾಚಾರದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಹೈದ್ರಾಬಾದಿನ ಎಡಪಂಥೀಯ ಹೋರಾಟಗಾರ, ಕ್ರಾಂತಿಕಾರಿ ಕವಿ ವರವರ ರಾವ್ , ಮುಂಬೈಯಲ್ಲಿ ವೆರ್ನಾನ್ ಗೊನ್ಜಾಲ್ವ್ಸ್, ಅರುಣ್ ಫೆರೀರಾ, ಛತ್ತೀಸ್ ಗಢದಲ್ಲಿ  ಟ್ರೇಡ್ ಯೂನಿಯನ್  ಹೋರಾಟಗಾರ್ತಿ ಸುಧಾ ಭಾರಾದ್ವಾಜ್,  ದೆಹಲಿಯಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com