ಗಾಂಧೀಜಿಯನ್ನೂ ಕೂಡ ಬಂಧಿಸುತ್ತಿದ್ದರು: ರಾಮಚಂದ್ರ ಗುಹಾ

ದೇಶಾದ್ಯಂತ ನಡೆದ ಮಾನವಹಕ್ಕು ಹೋರಾಟಗಾರರ ಮೇಲಿನ ದಾಳಿಯನ್ನು ಕಟುವಾಗಿ ಖಂಡಿಸಿರುವ ಖ್ಯಾತ ಲೇಖಕ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಗಾಂಧಿಜಿ ಇದಿದ್ದರೆ ಅವರನ್ನೂ ಕೂಡ ಬಂಧಿಸುತ್ತಿದ್ದರು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ದೇಶಾದ್ಯಂತ ನಡೆದ ಮಾನವಹಕ್ಕು ಹೋರಾಟಗಾರರ ಮೇಲಿನ ದಾಳಿಯನ್ನು ಕಟುವಾಗಿ ಖಂಡಿಸಿರುವ ಖ್ಯಾತ ಲೇಖಕ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಗಾಂಧಿಜಿ ಇದಿದ್ದರೆ ಅವರನ್ನೂ ಕೂಡ ಬಂಧಿಸುತ್ತಿದ್ದರು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡುತ್ತಾ, ಹೋರಾಟಗಾರರ ಮೇಲಿನ ದಾಳಿಯನ್ನು 'ಕ್ರೂರ, ಸರ್ವಾಧಿಕಾರಿ, ದಬ್ಬಾಳಿಕೆಯ, ಅನಿಯಂತ್ರಿತ ಹಾಗೂ ಅಕ್ರಮ ಕ್ರಮ ಎಂದು ಕರೆದರು. ಅಂತೆಯೇ ಆಡಳಿತದ ಸರ್ಕಾರದ ಕಾರ್ಪೊರೇಟ್ ಆಪ್ತರನ್ನು ದೂರಿದರು. 
'ಬುಡಕಟ್ಟುಗಳ ಜಾಗವನ್ನು ಕಬಳಿಸಲು, ಕಾಡು ಹಾಗು ಖನಿಜ ಸಂಪನ್ಮೂಲಗಳನ್ನು ದೋಚಲು ಕಾರ್ಪೋರೇಟ್ ಸಂಸ್ಥೆಗಳು ಮುಂದಾಗಿವೆ. ಆದರೆ ಇವರ ಈ ಪ್ರಯತ್ನಕ್ಕೆ ಹೋರಾಟಗಾರರು ಅಡ್ಡಿಯಾಗಿದ್ದು, ಇದೇ ಕಾರಣಕ್ಕೆ ಅವರ ಮೇಲೆ ದಾಳಿ ಮತ್ತು ಬಂಧನಗಳಾಗುತ್ತಿವೆ. ಹೋರಾಟಗಾರರ ಬಂಧನವು ಬುಡಕಟ್ಟುಗಳಿಗೆ ಪ್ರತಿನಿಧಿಗಳು ಇಲ್ಲದಂತೆ ಮಾಡುವುದೇ ಹೊರತು ಇನ್ನೇನಲ್ಲ ಎಂದು ಅವರು ಕಿಡಿಕಾರಿದರು. 
'ಬಂಧನಕ್ಕೊಳಗಾದವರಲ್ಲಿ ಕೆಲವರ ಪರಿಚಯ ತನಗಿದೆ. ಎಲ್ಲಾ ವಿಷಯದಲ್ಲೂ ತಾನು ಅವರೊಂದಿಗೆ ಸಹಮತ ಹೊಂದಿರಲಿಲ್ಲ. ಹಿಂಸೆಯ ಬಗ್ಗೆ ಅವರು ಪ್ರಚೋದನೆಯೂ ನೀಡಿರಲಿಲ್ಲ. ಅವರು ಹಿಂಸೆಯಲ್ಲಿ ತೊಡಗಿರಲಿಲ್ಲ. ಆದಿವಾಸಿ ನೆಲವಾದ ಭಾರತದಲ್ಲಿ ಏನು ನಡೆಯುತ್ತಿದೆ?. ಕೊಲೆ, ಅತ್ಯಾ ಚಾರ, ಇವರು ಬುಡಕಟ್ಟು ಜನರನ್ನು ಪ್ರತಿನಿಧಿಸುತ್ತಿದ್ದ ವಕೀಲರು. ಇವರ ಬಂಧನವು ಆದಿವಾಸಿಗಳನ್ನು ಕೋರ್ಟ್ ನಲ್ಲಿ ಪ್ರತಿನಿಧಿಸುವವರಿಲ್ಲದಂತೆ ಮಾಡುತ್ತದೆ. ಇಂದು ಮಹಾತ್ಮಾ ಗಾಂಧಿ ಬದುಕಿದ್ದರೆ, ಸುಧಾ ಭಾರದ್ವಾಜ್ ರನ್ನು ಅವರು ನ್ಯಾಯಾಲಯದಲ್ಲಿ ಬೆಂಬಲಿಸುತ್ತಿದ್ದರು ಎಂದು ನಾನು ಗಾಂಧೀಜಿಯ ಆತ್ಮಚರಿತ್ರೆಕಾರನಾಗಿ ಹೇಳಬಲ್ಲೆ. ಆದರೆ ಮೋದಿ ಸರ್ಕಾರ ಅವರನ್ನೂ ವಶಕ್ಕೆ ಪಡೆದು ಬಂಧಿಸುತ್ತಿರಲಿಲ್ಲವೇ ಎಂದು ಊಹಿಸುತ್ತಿದ್ದೆ ಎಂದು ಗುಹಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com