ಸಲೈನ್ ಮೂಲಕ ಪತ್ನಿಗೆ ಹೆಚ್ಐವಿ ಇಂಜೆಕ್ಟ್ ಮಾಡಿದ ಪತಿ: ದೂರು ನೀಡಿದ ಮಹಿಳೆ

ವೈದ್ಯನಾಗಿರುವ ಪತಿ ಸಲೈನ್ ಮೂಲಕ ತನಗೆ ಹೆಚ್ಐವಿ ಇಂಜೆಕ್ಟ್ ಮಾಡಿದ್ದಾನೆಂದು ಮಹಿಳೆಯೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪುಣೆ: ವೈದ್ಯನಾಗಿರುವ ಪತಿ ಸಲೈನ್ ಮೂಲಕ ತನಗೆ ಹೆಚ್ಐವಿ ಇಂಜೆಕ್ಟ್ ಮಾಡಿದ್ದಾನೆಂದು ಮಹಿಳೆಯೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. 
ನನ್ನ ಪತಿ ಹೋಮಿಯೋ ಪತಿ ವೈದ್ಯರಾಗಿದ್ದು, 2015ರಲ್ಲಿ ನಮ್ಮ ವಿವಾಹವಾಗಿತ್ತು. ವಿವಾಹವಾದಾಗಿನಿಂದಲೂ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡುತ್ತಲೇ ಇದ್ದಾರೆ. 2017ರ ಅಕ್ಟೋಬರ್ ತಿಂಗಳಿನಲ್ಲಿ ನಾನು ಅನಾರೋಗ್ಯಕ್ಕೀಡಾಗಿದ್ದೆ. ಈ ವೇಳೆ ನನ್ನ ಪತಿ ನನಗೆ ಸಲೈನ್ ನೀಡಿದ್ದರು. ಕಳೆದ ಫೆಬ್ರವರಿ ತಿಂಗಳಿನಲ್ಲಿಯೂ ನಾನು ಮತ್ತೆ ಅನಾರೋಗ್ಯಕ್ಕೀಡಾದಾಗ ಕೆಲ ಪರೀಕ್ಷೆಗಳನ್ನು ಮಾಡಿಸಲಾಗಿತ್ತು. ಈ ವೇಳೆ ಹೆಚ್ಐವಿ ಪಾಸಿಟಿವ್ ಬಂದಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ. 
ಇದೀಗ ನನ್ನ ಪತಿ ನನ್ನಿಂದ ವಿಚ್ಛೇದನವನ್ನು ಕೇಳುತ್ತಿದ್ದಾರೆ. ಸಲೈನ್ ಮೂಲಕ ಪತಿಯೇ ನನಗೆ ಹೆಚ್ಐವಿ ಇಂಜೆಕ್ಟ್ ಮಾಡಿದ್ದಾರೆ. ಖಾಸಗಿ ಲ್ಯಾಬ್ ನಲ್ಲಿ ನಾನು ಮತ್ತು ಪತಿ ಇಬ್ಬರೂ ಪರೀಕ್ಷೆ ಮಾಡಿಸಿದ್ದಾಗ ಇಬ್ಬರಲ್ಲೂ ಹೆಚ್ಐವಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. 
ಆದರೆ, ಈ ಬಗ್ಗೆ ಹೇಳಿಕೆ ನೀಡಿರುವ ಅಧಿಕಾರಿಗಳು ಸರ್ಕಾರಿ ಸಂಸ್ಥೆಯಲ್ಲಿ ಇಬ್ಬರಿಗೂ ಪರೀಕ್ಷೆ ನಡೆಸಲಾಗಿದ್ದು, ಮಹಿಳೆಗೆ ಮಾತ್ರವೇ ಹೆಚ್ಐವಿ ಇರುವುದು ಕಂಡು ಬಂದಿದೆ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಈವರೆಗೂ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com