ಜನರನ್ನು ಮನರಂಜಿಸುವ ಸರ್ಕಸ್'ನಲ್ಲಿ ಪ್ರಾಣಿ ಬಳಕೆ ನಿಷೇಧಕ್ಕೆ ಕೇಂದ್ರ ಚಿಂತನೆ

ಪ್ರಾಣಿಗಳ ಮೇಲಿನ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಸರ್ಕಸ್ ಕಂಪನಿಗಳಲ್ಲಿ ಪ್ರಾಣಿಗಳ ಬಳಕೆ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ...
ಜನರನ್ನು ಮನರಂಜಿಸುತ್ತಿದ್ದ ಸರ್ಕಸ್'ನಲ್ಲಿ ಪ್ರಾಣಿ ಬಳಕೆ ನಿಷೇಧಕ್ಕೆ ಕೇಂದ್ರ ಚಿಂತನೆ
ಜನರನ್ನು ಮನರಂಜಿಸುತ್ತಿದ್ದ ಸರ್ಕಸ್'ನಲ್ಲಿ ಪ್ರಾಣಿ ಬಳಕೆ ನಿಷೇಧಕ್ಕೆ ಕೇಂದ್ರ ಚಿಂತನೆ
ನವದೆಹಲಿ: ಪ್ರಾಣಿಗಳ ಮೇಲಿನ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಸರ್ಕಸ್ ಕಂಪನಿಗಳಲ್ಲಿ ಪ್ರಾಣಿಗಳ ಬಳಕೆ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 
ಪ್ರಸ್ತುತ ದೇಶದಲ್ಲಿ ಹುಲಿ, ಸಿಂಹಗಳನ್ನು ಸರ್ಕಸ್ ಗಳಲ್ಲಿ ಬಳಸಿಕೊಳ್ಳುವಂತಿಲ್ಲ ಎಂಬ ಕಾನೂನು ಇದೆ. ಇನ್ನು ಮುಂದಿನ ದಿನಗಳಲ್ಲಿ ಕುದುರೆ, ಆನೆ, ನಾಯಿ, ಕೋತಿ ಸೇರಿದಂತೆ ಇತರೆ ಪ್ರಾಣಿಗಳನ್ನೂ ಕೂಡ ಸರ್ಕಸ್ ಕಂಪನಿಘಳಲ್ಲಿ ಬಳಸುವುದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. 
ಈ ಕುರಿತಾದ ಪ್ರಸ್ತಾವನೆಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾದ ಪ್ರಾಣಿಗಳ ಪ್ರದರ್ಶನ ನೋಂದಣಿ ತಿದ್ದುಪಡಿ ನಿಯಮಗಳು-2018ರ ಕರಡು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com