ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ದೇಶ
ಬುಲಂದಶಹರ್ ಹಿಂಸಾಚಾರ: ಪೊಲೀಸ್ ಸಾವಿಗೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ
ಗೋವುಗಳ ಸಾಮೂಹಿತ ಹತ್ಯೆಯ ಸುದ್ದಿಯಿಂದ ಉದ್ರಿಕ್ತಗೊಂಡ ಗುಂಪೊಂದು ಉತ್ತರಪ್ರದೇಶದ ಪ್ರಮುಖ ನಗರವಾದ ಬುಲಂದಹಶಹರ್ ನಲ್ಲಿ ಸೋಮವಾರ ಭಾರೀ ಹಿಂಸಾಚಾರ ನಡೆಸಿದ್ದು, ಘಟನೆಯಲ್ಲಿ...
ಬುಲಂದಶಹರ್: ಗೋವುಗಳ ಸಾಮೂಹಿತ ಹತ್ಯೆಯ ಸುದ್ದಿಯಿಂದ ಉದ್ರಿಕ್ತಗೊಂಡ ಗುಂಪೊಂದು ಉತ್ತರಪ್ರದೇಶದ ಪ್ರಮುಖ ನಗರವಾದ ಬುಲಂದಹಶಹರ್ ನಲ್ಲಿ ಸೋಮವಾರ ಭಾರೀ ಹಿಂಸಾಚಾರ ನಡೆಸಿದ್ದು, ಘಟನೆಯಲ್ಲಿ ಪೊಲೀಸ್ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ.
ಹಿಂಸಾಚಾರ ನಿರತ ಗುಂಪಿನ ದಾಳಿಗೆ ನಿನ್ನೆ ಇನ್ಸ್ ಪೆಕ್ಟರ್ ಒಬ್ಬರು ಹತ್ಯೆಯಾಗಿದ್ದರು. ಪೊಲೀಸರು ನಡೆಸಿದ್ದ ಗೋಲಿಬಾರ್ ನಲ್ಲಿ ಯುವಕನೊಬ್ಬ ಸಾವಿಗೀಡಾಗಿದ್ದ.
ದುರತಂದಲ್ಲಿ ಇನ್ಸ್ ಪೆಕ್ಟರ್ ಸುಭೋಧ್ ಅವರು ಮೃತಪಟ್ಟಿದ್ದು, ಪೊಲೀಸ್ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಅಧಿಕಾರಿಯ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ಹಾಗೂ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ