ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳದಿರಿ: ಯುವಕರಿಗೆ ಹಮೀದ್ ಅನ್ಸಾರಿ

ಫೇಸ್'ಬುಕ್ ಮೂಲಕ ಪ್ರೀತಿ-ಪ್ರೇಮಕ್ಕೆ ಬಲಿಯಾಗದಿರಿ ಎಂದು ಪಾಕಿಸ್ತಾನದ ಹುಡುಗಿಯನ್ನು ಫೇಸ್ ಬುಕ್ ನಲ್ಲಿ ಪ್ರೀತಿಸಿ ಆಕೆಯನ್ನು ಭೇಟಿಯಾಗಿ ಅಲ್ಲಿಗೆ ಹೋಗಿ ಬೇಹುಗಾರನೆಂಬ ಶಂಕೆಯಲ್ಲಿ ಜೈಲು ಪಾಲಾಗಿ 6 ವರ್ಷಗಳ ಸೆರೆವಾಸ ಅನುಭವಿಸಿ...
ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳಬೇಡಿ: ಯುವಕರಿಗೆ ಹಮೀದ್ ಅನ್ಸಾರಿ
ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳಬೇಡಿ: ಯುವಕರಿಗೆ ಹಮೀದ್ ಅನ್ಸಾರಿ
Updated on
ನವದೆಹಲಿ: ಫೇಸ್'ಬುಕ್ ಮೂಲಕ ಪ್ರೀತಿ-ಪ್ರೇಮಕ್ಕೆ ಬಲಿಯಾಗದಿರಿ ಎಂದು ಪಾಕಿಸ್ತಾನದ ಹುಡುಗಿಯನ್ನು ಫೇಸ್ ಬುಕ್ ನಲ್ಲಿ ಪ್ರೀತಿಸಿ ಆಕೆಯನ್ನು ಭೇಟಿಯಾಗಿ ಅಲ್ಲಿಗೆ ಹೋಗಿ ಬೇಹುಗಾರನೆಂಬ ಶಂಕೆಯಲ್ಲಿ ಜೈಲು ಪಾಲಾಗಿ 6 ವರ್ಷಗಳ ಸೆರೆವಾಸ ಅನುಭವಿಸಿ ಇದೀಗ ಭಾರತಕ್ಕೆ ಮರಳಿರುವ ಸಾಫ್ಟ್ ವೇರ್ ಇಂಜಿನಿಯರ್ ಹಮೀದ್ ಅನ್ಸಾರಿ ಯುವಕರಿಗೆ ಕಿವಿಮಾತು ಹೇಳಿದ್ದಾರೆ. 
ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಗೆ ಬಿದ್ದು, ಅದರಿಂದ ನರಕ ದರ್ಶನ ಮಾಡಿ ಬಂದಿರುವ ಹಮೀದ್ ಅನ್ಸಾರಿಯವರ ಕಥೆ ಇಂದಿನ ಯುವಕರಿದ ಒಂದು ಪಾಠವಾಗಿದೆ ಎಂದೇ ಹೇಳಬಹುದು. 
2 ದಿನಗಳ ಹಿಂದ ಪಾಕಿಸ್ತಾನ ಸರ್ಕಾರದಿಂದ ಬಿಡುಗಡೆಗೊಂಡು ಅಟ್ಟಾರಿ ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿರುವ ಅನ್ಸಾರಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. 
ಈ ವೇಳೆ ಯುವಕರಿಗೆ ತಮ್ಮ ಅನುಭವ ಹಾಗೂ ನೋವನ್ನು ಹಂಚಿಕೊಂಡಿರುವ ಅನ್ಸಾರಿಯವರು, ಯುವಕರಿಗೆ ಕಿವಿಮಾತು ಹೇಳಿದ್ದಾರೆ. 
ಫೇಸ್ ಬುಕ್ ಮೂಲಕ ನಾನು ಪಾಕಿಸ್ತಾನ ಮೂಲಕ ಯುವತಿಯ ಪ್ರೀತಿಯಲ್ಲಿ ಬಿದ್ದಿದ್ದೆ. ಬಳಿಕ ಆಕೆಗೆ ಬಲವಂತದಿಂದ ವಿವಾಹ ಮಾಡಲಾಗುತ್ತಿದೆ ಎಂಬ ವಿಚಾರ ತಿಳಿದು, ಆಕೆಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದೆ. ಬಳಿಕ ನಾನು ಅಲ್ಲಿ ಬಂಧನಕ್ಕೊಳಗಾಗಿದ್ದೆ. ಪೋಷಕರ ಬಳಿ ಯಾವುದನ್ನೂ ಮುಚ್ಚಿಡಬೇಕಿ. ಸಂದಿಗ್ಧ ಸಮಯದಲ್ಲಿ ನಮ್ಮೊಂದಿಗೆ ನಿಲ್ಲುವುದು ಕೇವಲ ಪೋಷಕರು ಮಾತ್ರ. ವಿದೇಶಕ್ಕೆ ಅಥವಾ ಯಾವುದೇ ಸ್ಥಳಕ್ಕೆ ಹೋಗಲು ಅಕ್ರಮ ಮಾರ್ಗ ಅಥವಾ ವಿಧಾನಗಳನ್ನು ಬಳಸಬೇಡಿ. ಪ್ರೀತಿಗೆ ಬಿದ್ದ ಸಂದರ್ಭದಲ್ಲಿ ಕಠಿಣ ಸವಾಲುಗಳನ್ನು ಎದುರು ಹಾಕಿಕೊಳ್ಳಬೇಡಿ. ಫೇಸ್ ಬುಕ್ ನಂಬಿ ಎಂದಿಗೂ ಪ್ರೀತಿಯಲ್ಲಿ ಬೀಳದಿರಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com