ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ: ತುಂಬು ಗರ್ಭಿಣಿಗೆ ಹೆಚ್ಐವಿ ಸೋಂಕು ಪೀಡಿತ ರಕ್ತ ನೀಡಿದ ಸಿಬ್ಬಂದಿ

ಮಾರಣಾಂತಿಕ ಕಾಯಿಲೆ ಹೆಚ್ಐವಿ ಸೋಂಕುನಿಂದ ಕೂಡಿದ ರಕ್ತವನ್ನು ತುಂಬು ಗರ್ಭಿಣಿ ಯುವತಿಗೆ ನೀಡಿದ ಪರಿಣಾಮ ಆಕೆ ಕೂಡ ಹೆಚ್ಐವಿ ಪೀಡಿತೆಯಾಗಿರುವ ಘಟನೆ ಚೆನ್ನೈ ನಗರದಲ್ಲಿ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಮಾರಣಾಂತಿಕ ಕಾಯಿಲೆ ಹೆಚ್ಐವಿ ಸೋಂಕುನಿಂದ ಕೂಡಿದ ರಕ್ತವನ್ನು ತುಂಬು ಗರ್ಭಿಣಿ ಯುವತಿಗೆ ನೀಡಿದ ಪರಿಣಾಮ ಆಕೆ ಕೂಡ ಹೆಚ್ಐವಿ ಪೀಡಿತೆಯಾಗಿರುವ ಘಟನೆ ಚೆನ್ನೈ ನಗರದಲ್ಲಿ ಬೆಳಕಿಗೆ ಬಂದಿದೆ. 
ಚೆನ್ನೈ ನಗರದಿಂದ 500 ಕಿ.ಮೀ ದೂರದಲ್ಲಿರುವ ವಿರುದ್ಧು ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. 
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ನೆರೆಯ ಶಿವಕಾಶಿಯಲ್ಲಿರುವ ರಕ್ತ ನಿಧಿಯಿಂದ 3 ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 
ರಕ್ತವನ್ನು ದಾನ ಮಾಡಿದ್ದ ವ್ಯಕ್ತಿಯೇ ಸ್ವತಃ ತಾನು ಹೆಚ್ಐವಿ ರೋಗ ಪೀಡಿತನೆಂದು ಹೇಳಿಕೊಂಡಿದ್ದಾನೆಯ ಆದರೂ ಈ ಮಾಹಿತಿಯನ್ನು ದಾಖಲಿಸಿಕೊಳ್ಳುವಲ್ಲಿ ಸಿಬ್ಬಂದಿಗಳು ವಿಫಲರಾಗಿದ್ದರು ಎಂದು ಆರೋಪಿಸಲಾಗಿದೆ. 
2 ವರ್ಷಗಳ ಹಿಂದೆ ಎನ್'ಜಿಒ ಒಂದು ರಕ್ತದಾನ ಶಿಬಿರ ನಡೆಸಿತ್ತು. ಈ ವೇಳೆ ವ್ಯಕ್ತಿಯೊಬ್ಬ ರಕ್ತದಾನ ಮಾಡಿದಾದೆ. ರಕ್ತವನ್ನು ಪರೀಕ್ಷೆ ನಡೆಸಿದಾಗ ವ್ಯಕ್ತಿಯಲ್ಲಿ ಹೆಚ್ಐವಿ ಮತ್ತು ಹೆಪಟೈಟಿಸಿ ಬಿ ಇರುವುದು ಕಂಡು ಬಂದಿದೆ. ಆದರೂ, ಲ್ಯಾಬ್ ಸಿಬ್ಬಂದಿಗಳು ಇದನ್ನು ದಾಖಲಿಸಿಕೊಂಡಿಲ್ಲ ಹಾಗೂ ವ್ಯಕ್ತಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ. 
ರಕ್ತದಾನ ಮಾಡಿದ್ದ ವ್ಯಕ್ತಿ ವಿದೇಶಕ್ಕೆ ತೆರಳಬೇಕಿದ್ದ ಕಾರಣ ಮದುರೈ ಜಿಲ್ಲೆಯಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಕೊಂಡಿದ್ದಾನೆ. ಈ ವೇಳೆ ತನಗೆ ಹೆಚ್ಐವಿ ಇರುವುದಾಗಿ ತಿಳಿದುಕೊಂಡಿದ್ದಾರೆ. ಬಳಿಕ ತಾನು ರಕ್ತದಾನ ಮಾಡಿದ್ದ ರಕ್ತನಿಧಿಗೂ ಮಾಹಿತಿ ನೀಡಿದ್ದಾರೆ. ಆದರೂ, ಲ್ಯಾಬ್ ಸಿಬ್ಬಂದಿಗಳು ಇದನ್ನು ದಾಖಲಿಸಿಕೊಂಡಿಲ್ಲ. 
8 ತಿಂಗಳ ಗರ್ಭಿಣಿಯೊಬ್ಬರು ತಪಾಸಣೆಗಾಗಿ ಸುತ್ತೂರು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದು, ಕೂಡಲೇ ರಕ್ತ ನೀಡಬೇಕೆಂದು ತಿಳಿಸಿದ್ದಾರೆ. ಬಳಿಕ ಶಿವಕಾಶಿ ಸರ್ಕಾರಿ ಆಸ್ಪತ್ರೆಯ ರಕ್ತನಿಧಿಯಿಂದ '0' ಪಾಸಿಟಿವ್ ಇರುವ ರಕ್ತವನ್ನು ತಂದು ಡಿಸೆಂಬರ್ 3 ರಂದು ಮಹಿಳೆಗೆ ನೀಡಲಾಗಿದೆ. ರಕ್ತ ನೀಡಿದ ಕೇವಲ 1 ವಾರದಲ್ಲಿಯೇ ಮಹಿಳೆಗೆ ಏಡ್ಸ್ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ಕೂಡಲೇ ಆಸ್ಪತ್ರೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com