ನವದೆಹಲಿ: ತನ್ನ ಜೀವದ ಹಂಗನ್ನು ತೋರೆದು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ತಾಯಿ ಹಾಗೂ 1 ವರ್ಷದ ಮಗವನ್ನು ರಕ್ಷಿಸಿದ ಆಟೋ ಚಾಲಕ ಕೊನೆಗೆ ವಿಧಿಯಾಟದ ಮುಂದೆ ಸೋತ್ತಿದ್ದಾನೆ.
ಹೌದು ಶನಿವಾರ ಬೆಳಗ್ಗೆ ದೆಹಲಿಯಲ್ಲಿ ಮೀತಾಪುರ ಕಾಲುವೆ ಮೇಲಿನ ಸೇತುವೆ ಮೇಲೆ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ನಿಂತಿರುವುದನ್ನು 30 ವರ್ಷದ ಆಟೋ ಚಾಲಕ ಪವನ್ ಶಾ ನೋಡಿದ್ದಾರೆ.
ಆಕೆ ಮಗುವಿನ ಜತೆಗೆ ನೀರಿಗೆ ಬಿದ್ದಿದ್ದಾಳೆ. ಕೂಡಲೇ ಆಟೋ ನಿಲ್ಲಿಸಿ ಶಾ ನದಿಗೆ ಹಾರಿ ಮಗು ಹಾಗೂ ತಾಯಿಯನ್ನು ರಕ್ಷಿಸಿದ್ದಾರೆ. ಇಬ್ಬರನ್ನು ದಡಕ್ಕೆ ಎಳೆದುಕೊಂಡು ಬರಲು ಸಾಧ್ಯವಾಗದ ಕಾರಣ ಸಹಾಯಕ್ಕಾಗಿ ಕೂಗಿದ್ದಾನೆ. ಈ ವೇಳೆ ಅಲ್ಲಿದ್ದ ಮೂವರು ಯುವಕರು ನೆರವಿಗೆ ದಾವಿಸಿದ್ದಾರೆ.
ಮಾನವ ಸರಪಣಿ ರಚಿತಿ ತಾಯಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಪವನ್ ಶಾರನ್ನು ಹಿಡಿದುಕೊಳ್ಳುವಷ್ಟರಲ್ಲಿ ನೀರಿನ ರಭಸಕ್ಕೆ ಶಾ ಕೊಚ್ಚಿ ಹೋಗಿದ್ದಾನೆ. ನಂತರ ಮೂವರು ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.