ದೆಹಲಿ, ಉತ್ತರಪ್ರದೇಶದ 16 ಕಡೆ ಎನ್ಐಎ ದಾಳಿ: ಇಸಿಸ್ ನಂಟು ಪತ್ತೆ, 10 ಮಂದಿ ಬಂಧನ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯ ನಂಟು ಇರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉತ್ತರಪ್ರದೇಶ ಹಾಗೂ ರಾಜಧಾನಿ ದೆಹಲಿಯ ಒಟ್ಟು 16 ಪ್ರದೇಶಗಳಲ್ಲಿ...
ದೆಹಲಿ, ಉತ್ತರಪ್ರದೇಶದ 16 ಕಡೆ ಎನ್ಐಎ ದಾಳಿ: ಇಸಿಸ್ ನಂಟು ಪತ್ತೆ, 10 ಮಂದಿ ಬಂಧನ
ದೆಹಲಿ, ಉತ್ತರಪ್ರದೇಶದ 16 ಕಡೆ ಎನ್ಐಎ ದಾಳಿ: ಇಸಿಸ್ ನಂಟು ಪತ್ತೆ, 10 ಮಂದಿ ಬಂಧನ
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯ ನಂಟು ಇರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉತ್ತರಪ್ರದೇಶ ಹಾಗೂ ರಾಜಧಾನಿ ದೆಹಲಿಯ ಒಟ್ಟು 16 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ 10 ಮಂದಿಯನ್ನು ಬಂಧನಕ್ಕೊಳಪಡಿಸಿದೆ ಎಂದು ಬುಧವಾರ ತಿಳಿದುಬಂದಿದೆ. 
ಕಾರ್ಯಾಚರಣೆ ಹರ್ಕತ್ ಉಲ್ ಹರ್ಬ್ ಇ ಇಸ್ಲಾಂ ಎಂಬ ಹೊಸ ಉಗ್ರ ಸಂಘಟನೆ ನಂಟು ಕೂಡ ಪತ್ತೆಯಾಗಿದ್ದು, ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ  ಮುಂದುವರೆಸಿದ್ದಾರೆಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ. 
ಡಿ.19 ರಂದು ಚೆನ್ನೈನ ಮೂವರು ಪ್ರದೇಶಗಳು ಸೇರಿ ತಮಿಳುನಾಡಿನ ಒಟ್ಟು 7 ಪ್ರದೇಶಗಳಲ್ಲಿ ಎನ್ಐಎ ದಾಳಿ ನಡೆಸಿತ್ತು. 
ಉತ್ತರಪ್ರದೇಶ ಅಮ್ರೋಹಾ ಎಂಬ ಪ್ರದೇಶವನ್ನು ಅಧಿಕಾರಿಗಳು ಸುತ್ತುವರೆದಿರುವುದು ಕಂಡು ಬಂದಿದ್ದು, ಈ ಪ್ರದೇಶದಲ್ಲಿ ಐವರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com