ಘಾಜಿಪುರ: ನಿಷ್ಕ್ರಿಯ ಪೊಲೀಸ್ ಇಲಾಖೆಯೇ ನನ್ನ ತಂದೆ ಸಾವಿಗೆ ಜವಾಬ್ದಾರಿ ಎಂದು ಘಾಜಿಪುರ ಕಲ್ಲು ತೂರಾಟ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್ ಪೇದೆ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಂದೆ ಸಾವು ಕುರಿತಂತೆ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೊಲೀಸ್ ಪೇದೆ ಪುತ್ರ ವಿ.ಕೆ. ಸಿಂಗ್, ಇಲಾಖೆಯಲ್ಲಿಯೇ ಕೆಲ ಮಾಡುತ್ತಿರುವ ಒಬ್ಬ ಪೊಲೀಸ್'ಗೆ ರಕ್ಷಣೆ ನೀಡಲಾಗದ ಪೊಲೀಸರಿಂದ ಸಾಮಾನ್ಯ ಜನರು ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ರ್ಯಾಲಿ ಅಂತ್ಯಗೊಂಡ ಬಳಿಕ ಘರ್ಷಣೆ ಎದುರಾಗಿದೆ. ಘರ್ಷಣೆ ನಡೆಸುತ್ತಿದ್ದರೂ ವಿಐಪಿಗಳು ಕುಳಿತಿರುವ ಕಾರುಗಳು ಸಾಗುತ್ತಿರುವುದು ಕಂಡು ಬಂದಿದೆ. ಒಬ್ಬೇ ಒಬ್ಬ ಅಧಿಕಾರಿಯಾದರೂ ಕಾರು ನಿಲ್ಲಿಸಿ ಏನಾಗುತ್ತಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿಲ್ಲ. ಕೇವಲ ತಮ್ಮ ತಮ್ಮ ಪ್ರಾಣಗಳನ್ನಷ್ಟೇ ಕಾಪಾಡಿಕೊಳ್ಳುವುದನ್ನು ನೋಡಿದ್ದಾರೆ.
ಪರಿಹಾರ, ಉದ್ಯೋಗ ನೀಡುವುದರಿಂದ ಅಪರಾಧ, ಹಿಂಸಾಚಾರದಂತಹ ಸಮಸ್ಯೆಗಳು ಪರಿಹಾರಗೊಳ್ಳುವುದಿಲ್ಲ. ಬುಲಂದ್ ಶೆಹರ್ ಹಾಗೂ ಪ್ರತಾಪ್ಗರ್ಹ್ ನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಪ್ರಾಣಕ್ಕೆ ಸರ್ಕಾರ ಹೇಗೆ ಪರಿಹಾರ ನೀಡಲು ಸಾಧ್ಯ? ಎಂದು ಕೇಳಿದ್ದಾರೆ.