ಗಡಿಯಲ್ಲಿ ಬಲ ಹೆಚ್ಚಳಕ್ಕೆ 600 ಯುದ್ಧ ಟ್ಯಾಂಕ್ ಖರೀದಿಗೆ ಮುಂದಾದ ಪಾಕ್‌

ಭಾರತದ ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಪಾಕಿಸ್ತಾನ, ರಷ್ಯಾದಿಂದ ಟಿ-90 ಯುದ್ಧ ಟ್ಯಾಂಕ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಭಾರತದ ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಪಾಕಿಸ್ತಾನ, ರಷ್ಯಾದಿಂದ ಟಿ-90 ಯುದ್ಧ ಟ್ಯಾಂಕ್ ಸೇರಿದಂತೆ 600 ಯುದ್ಧ ಟ್ಯಾಂಕ್ ಗಳನ್ನು ಖರೀದಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪಾಕ್‌ ಖರೀದಿಸುತ್ತಿರುವ ಟ್ಯಾಂಕ್‌ಗಳು ಮೂರರಿಂದ ನಾಲ್ಕು ಕಿ.ಮೀ ದೂರದ ವರೆಗೆ ಗುರಿ ತಲುಪಬಲ್ಲ ಸಾಮರ್ಥ್ಯ ಉಳ್ಳವು ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಯುದ್ಧ ಟ್ಯಾಂಕ್‌ಗಳು ಹೊರತು ಪಡಿಸಿ 250ರಷ್ಟು 150ಎಂಎಂ ಎಸ್ ಪಿ ಮೈಕ್ -10 ಗನ್‌ಗಳನ್ನು ಇಟಲಿಯಿಂದ ತರಿಸಿಕೊಳ್ಳುತ್ತಿದ್ದು, ಈಗಾಗಲೇ 120ನ್ನು ತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಪಾಕಿಸ್ಥಾನ ರಷ್ಯಾದಿಂದ ಟಿ-90ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲು ಮುಂದಾಗಿದ್ದು, ಮಾಸ್ಕೋದೊಂದಿಗೆ ಆಳವಾದ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.
2025 ರ ವೇಳೆಗೆ ಶಸಸ್ತ್ರ ಪಡೆಗಳನ್ನು ಬಲಪಡಿಸಲು ಹೆಜ್ಜೆ ಇರಿಸಿರುವ ಪಾಕ್‌ ಮಿತ್ರ ರಾಷ್ಟ್ರ ಚೀನಾದಿಂದಲೂ 220 ಟ್ಯಾಂಕ್‌ಗಳನ್ನು ತರಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಬಳಿ ಸದ್ಯ ಪಾಕ್‌ಗಿಂತಲೂ ಉತ್ತಮವಾದ ಟ್ಯಾಂಕ್‌ಗಳಿದ್ದು, ಟಿ-90, ಟಿ-72ಮತ್ತು ಅರ್ಜುನ ಟ್ಯಾಂಕ್‌ಗಳಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com