ಗಂಡು ಮಗು ಬೇಕೆಂಬ ಹಠ: 10ನೇ ಹೆರಿಗೆ, ಗರ್ಭದಲ್ಲಿಯೇ ಮೃತಪಟ್ಟ ಮಗುವಿಗೆ ಜನ್ಮ ನೀಡಿ ತಾಯಿ ದುರ್ಮರಣ

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 10ನೇ ಬಾರಿಗೆ ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 10ನೇ ಬಾರಿಗೆ ಹೆರಿಗೆ  ಸಂದರ್ಭದಲ್ಲಿ  ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಬೀಡ್ ಜಿಲ್ಲಾ ಕೇಂದ್ರದಿಂದ 380 ಕಿಲೋ ಮೀಟರ್ ದೂರದಲ್ಲಿರುವ ಮಜಲ್ಗಾಂವ್ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೀರಾ ಎಖಂಡೆ ಶನಿವಾರ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ಆದರೆ, ಆ ಮಗು ತಾಯಿಯ ಗರ್ಭದಿಂದ ಹೊರ ಬರುವ ಮುನ್ನವೇ ಮೃತಪಟ್ಟಿತ್ತು.   ಕೆಲ ತಾಸುಗಳ ನಂತರ ಆಕೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ
.ಮೀರಾ ಎಖಂಡೆ ಈಗಾಗಲೇ ಏಳು ಹೆಣ್ಣು ಮಕ್ಕಳ ತಾಯಿಯಾಗಿದ್ದಳು. ಆದರೆ, ಗಂಡು ಮಕ್ಕಳು ಬೇಕೆಂಬುದು ಅವರ ಕುಟುಂಬದ  ಒತ್ತಾಸೆಯಾಗಿತ್ತು.
ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com