ನೀತಿ ಆಯೋಗದ ಸಿಇಒ ಆಧಿಕಾರವಧಿ ವಿಸ್ತರಣೆ

ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿದೆ.
ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ (ಸಾಂದರ್ಭಿಕ ಚಿತ್ರ)
ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ (ಸಾಂದರ್ಭಿಕ ಚಿತ್ರ)
Updated on: 

ದೆಹಲಿ : ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿದೆ.

 ಜೂನ್ 30, 2019ರವರೆಗೂ ಅವರ ಅವಧಿಯನ್ನು ವಿಸ್ತರಿಸಿ ಅಧಿಕೃತ ಆದೇಶ ಹೊರಬಿದ್ದಿದೆ.ಈ ಹಿಂದಿನ ನಿಯಾಮಾವಳಿಗಂತೆ ನೀತಿ ಆಯೋಗದ ಮುಖ್ಯಸ್ಥರ ಅವಧಿಯನ್ನು ಜೂನ್ ವರೆಗೂ ವಿಸ್ತರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಅಮಿತಾಬ್ ಕಾಂತ್ 1980ರ ಬ್ಯಾಚ್ ಕೇರಳ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ.  ಅಮಿತಾಬ್ ಕಾಂತ್ ಎರಡು ವರ್ಷಗಳ ಅವಧಿಯ  ನೀತಿ ಆಯೋಗದ ಸಿಇ ಒಆಗಿ  2016ರಲ್ಲಿ ನೇಮಕವಾಗಿದ್ದರು.

ಅಮಿತಾಬ್ ಕಾಂತ್ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಕಾರ್ಯನಿರ್ವಹಿಸಿದ್ದಾರೆ. ಯುಎನ್ ಡಿಪಿಎ -ಗ್ರಾಮೀಣ ಪ್ರವಾಸೋದ್ಯಮ  ಯೋಜನೆಯ ರಾಷ್ಟ್ರೀಯ  ಯೋಜನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಅಲ್ಲದೇ  ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿಯೂ  ಕಾರ್ಯನಿರ್ವಹಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com