ಪಾಕಿಸ್ತಾನ ಉಗ್ರರ ರವಾನೆ ನಿಲ್ಲಿಸದಿದ್ದರೆ, ಭಾರತದಿಂದ ಯುದ್ಧ ಸಾಧ್ಯತೆ: ಫರೂಖ್ ಅಬ್ದುಲ್ಲಾ

ಭಾರತದೊಂದಿಗೆ ಉತ್ತಮ ಸಂಬಂಧ ಬಯಸುವುದಾದರೆ, ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ, ಭಾರತ ಯುದ್ಧ ಸಾರಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ...
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ
ಶ್ರೀನಗರ: ಭಾರತದೊಂದಿಗೆ ಉತ್ತಮ ಸಂಬಂಧ ಬಯಸುವುದಾದರೆ, ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ, ಭಾರತ ಯುದ್ಧ ಸಾರಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ. 
ಜಮ್ಮುವಿನ ಹೊರವಲಯದಲ್ಲಿರುವ ಚೆನ್ನಿ ಪ್ರಾಂತ್ಯದಲ್ಲಿರುವ ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಉಗ್ರರ ದಾಳಿ, ಪಾಕಿಸ್ತಾನದಿಂದ ಬಂದಂತಹ ಉಗ್ರರು ಭಾರತದ ಗಡಿನುಸುಳುವಂತಹ ಪ್ರಕರಣಗಳಿಲ್ಲದೆ ದಿನಗಳು ಸಾಗದು. ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುವುದೇ ಆದರೆ, ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲದೆ, ಹೋದರೆ, ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಇದೇ ರೀತಿ ತನ್ನ ದುರ್ವತನೆಯನ್ನು ಮುಂದುವರೆಸಿದ್ದೇ ಆದರೆ, ಭಾರತದ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com