ಈಗ ನಡೆಯುತ್ತಿರುವ ಯೋಜನೆಗಳಿಗೆ ಪ್ಯಾಲೆಸ್ತೀನ್ ಅಧ್ಯಕ್ಷರು ಭಾರತವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೊಸ ಎರಡು ಯೋಜನೆಗಳನ್ನು ಗಮನಕ್ಕೆ ತರಲು ಬಯಸುತ್ತೇನೆ. ಭಾರತ ಪ್ಯಾಲೆಸ್ತೀನ್ ನಲ್ಲಿ 100 ಬೆಡ್ ಗಳ ಅತ್ಯಾಧುನಿಕ ವಿಶೇಷ ಆಸ್ಪತ್ರೆಯನ್ನು ನಿರ್ಮಿಸಲಿದೆ. ಅಲ್ಲದೆ ಭಾರತ, ಪ್ಯಾಲೆಸ್ತೀನ್ ನಲ್ಲಿ ಮಹಿಳಾ ಸಶಕ್ತೀಕರಣ ಕೇಂದ್ರವನ್ನು ನಿರ್ಮಿಸಲಿದ್ದು, ಅಲ್ಲಿ ಪ್ಯಾಲೆಸ್ತೀನ್ ನ ವಿವಿಧ ಭಾಗಗಳ ಮಹಿಳೆಯರು ಬಂದು ಕೌಶಲ್ಯಗಳನ್ನು ಕಲಿಯಬಹುದು ಎಂದು ವಿಜಯ್ ಗೋಖಲೆ ತಿಳಿಸಿದರು.