ದತ್ತು ಪಡೆದ ಅನಾಥ ಹಿಂದು ಪುತ್ರನಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ ಮುಸ್ಲಿಂ ಕುಟುಂಬ

ದತ್ತು ಪಡೆದಿದ್ದ ಹಿಂದೂ ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಕುಟುಂಬವೊಂದು ವಿವಾಹ ಮಾಡಿರುವ ಘಟನೆಯೊಂದು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ ನಡೆದಿದೆ...
ದತ್ತು ಪಡೆದ ಅನಾಥ ಹಿಂದು ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿದ ಮುಸ್ಲಿಂ ಕುಟುಂಬ
ದತ್ತು ಪಡೆದ ಅನಾಥ ಹಿಂದು ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿದ ಮುಸ್ಲಿಂ ಕುಟುಂಬ
ಡೆಹ್ರಾಡೂನ್ (ಉತ್ತರಾಖಂಡ): ದತ್ತು ಪಡೆದಿದ್ದ ಹಿಂದೂ ಪುತ್ರನಿಗೆ ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಕುಟುಂಬವೊಂದು ವಿವಾಹ ಮಾಡಿರುವ ಘಟನೆಯೊಂದು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ ನಡೆದಿದೆ. 
ಅನಾಥನಾಗಿದ್ದ ರಾಕೇಶ್ ಅವರು 12 ವರ್ಷದ ಬಾಲಕನಾಗಿದ್ದಾಗ ಮೌನುದ್ದೀನ್ ಅವರ ಕುಟುಂಬ ದತ್ತು ಪಡೆದುಕೊಂಡಿತ್ತು. ಆದರೆ, ಮನೆಯಲ್ಲಿ ರಾಕೇಶ್ ಗೆ ಯಾವುದೇ ಧಾರ್ಮಿಕ ಕಟ್ಟು-ಪಾಡುಗಳನ್ನು ವಿಧಿಸಿರಲಿಲ್ಲ. 
ಬಳಿಕ ಮೌನುದ್ದೀನ್ ಕುಟುಂಬದವರು ರಾಕೇಶ್ ಅವರಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸಿ ಕೋಮು ಸೌಹಾರ್ದತೆಯನ್ನು ಸಾರಿದ್ದಾರೆ. ಫೆ.9 ರಂದು ಸೋನಿ ಎಂಬ ಯುವತಿಯೊಂದಿಗೆ ರಾಕೇಶ್ ಅವರು ಸಪ್ತಪದಿ ತುಳಿದಿದ್ದಾರೆ. ರಾಕೇಶ್ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ಮಾಡಿಸಿ ಮೌನುದ್ದೀನ್ ಅವರು ಸೊನೆಯನ್ನು ಮನೆ ತುಂಬಿಸಿಕೊಂಡಿದ್ದಾರೆ. 
ಹೋಳಿ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳನ್ನು ನಾನು ಇದೇ ಮನೆಯಲ್ಲಿಯೇ ಆಚರಿಸುತ್ತಿದ್ದೇನೆ. ಮದುವೆ ಸೇರಿದಂತೆ ಪ್ರತೀಯೊಂದು ಹಂತದಲ್ಲಿಯೂ ನನ್ನ ಕುಟುಂಬ ನನಗೆ ಬೆಂಬಲ ನೀಡಿದೆ. ಪ್ರೋತ್ಸಾಹ ನೀಡಿದೆ. ನಾನು ಮುಸ್ಲಿಂ ಕುಟುಂಬದಲ್ಲಿ ವಾಸಿಸುತ್ತಿದ್ದೇನೆಂಬ ಭಾವನೆಯೇ ನನಗಿಲ್ಲ. ನನ್ನ ಪೂಜಾ ಕಾರ್ಯಗಳಿಗೆ ಮನೆಯಲ್ಲಿ ಯಾರೂ ನಿರ್ಬಂಧ ಹೇರಿಲ್ಲ ಎಂದು ರಾಕೇಶ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com