

ಮುಂಬೈ : ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಉತ್ತರ ಮಹಾರಾಷ್ಟ್ರ ಭಾಗಗಳಲ್ಲಿ ಹಲಾಬೊಲ್ ಹೆಸರಿನಲ್ಲಿ 21 ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.
ಎಳು ದಿನಗಳ ಪ್ರಚಾರ ಕಾರ್ಯಕ್ರಮದಲ್ಲಿ ಈಗಾಗಲೇ ಎರಡು ಹಂತ ಪೂರ್ಣಗೊಂಡಿದ್ದು, ಇದೇ 15 ರಿಂದ ಮೂರನೇ ಹಂತ ಪ್ರಾರಂಭವಾಗಲಿದೆ.ಶ್ರಿಗೊಂಡಾದಿಂದ ಆರಂಭವಾಗುವ ಪ್ರಚಾರ ಅಹಮದ್ ನಗರ್, ನಾಸಿಕ್, ಜಲ್ ಗೊಯಾನ್ ಮತ್ತು ದುಲೈ ಜಿಲ್ಲೆಗಳಲ್ಲಿ ಸಾಗಲಿದೆ ಎಂದು ಪಕ್ಷದ ವಕ್ತಾರ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.
ನಾಸಿಕ್ ನಲ್ಲಿ ಮಾರ್ಚ್ 10 ರಂದು ನಡೆಯುವ ಅಂತಿಮ ಸಭೆಯನ್ನುದ್ದೇಶಿಸಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದರ್ಭ ಹಾಗೂ ಮರಾಠವಾಡದಲ್ಲಿಯೂ ಪ್ರಚಾರ ನಡೆಸಲಾಗಿದೆ.