ಸುಂಜುವಾನ್ ಉಗ್ರ ದಾಳಿ ಬೆನ್ನಲ್ಲೇ ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆ ವಿಫಲಗೊಳಿಸಿದ ಸೇನೆ!

ಸತತ 2 ಉಗ್ರ ದಾಳಿ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿಯಲ್ಲಿ ಭಾರತದ ಗಡಿಯೊಳಗೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಗುರುವಾರ ಯಶಸ್ವಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಶ್ರೀನಗರ: ಸತತ 2 ಉಗ್ರ ದಾಳಿ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿಯಲ್ಲಿ ಭಾರತದ ಗಡಿಯೊಳಗೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಗುರುವಾರ  ಯಶಸ್ವಿಯಾಗಿದೆ. 
ಗುರುವಾರ ಬೆಳಗ್ಗೆ ಕಾಶ್ಮೀರದ ಪೂಂಛ್ ನ ಮೆಂಧಾರ್ ಸೆಕ್ಟರ್ ನಲ್ಲಿ ಭಾರತೀಯ ಸೇನೆಯ ಕಣ್ತಪ್ಪಿಸಿ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರನ್ನು ಭಾರತೀಯ ಸೇನೆಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಶಂಕಿತ  ವ್ಯಕ್ತಿಗಳು ಗಡಿಯೊಳಗೆ ನುಸುಳುತ್ತಿದ್ದಂತೆಯೇ ಅವರತ್ತ ಸೇನೆ ಗುಂಡು ಹಾರಿಸಿದ್ದು, ಈ ವೇಳೆ ಉಗ್ರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪರಾರಿಯಾಗಿರುವ ಉಗ್ರರಿಗಾಗಿ ಸಿಆರ್ ಪಿಎಫ್ ಯೋಧರು ತೀವ್ರ  ಶೋಧ ನಡೆಸುತ್ತಿದ್ದು, ಅಂತೆಯೇ ಇದಕ್ಕೂ ಮೊದಲು ಉಗ್ರರು ಭಾರತದೊಳಗೆ ನುಸುಳಿರುವ ಶಂಕೆ ಮೇರೆಗೆ ಶೋಧ ತೀವ್ರ ಗೊಳಿಸಲಾಗಿದೆ.
ಇನ್ನು ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ 2 ಪ್ರತ್ಯೇಕ ಉಗ್ರ ದಾಳಿಗಳಲ್ಲಿ ಸೈನಿಕರು, ಸಾರ್ವಜನಿಕರು ಹಾಗೂ ಉಗ್ರರು ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದರು. ಸುಂಜುವಾನ್ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ  ಸೈನಿಕರು ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದರೆ, ಇಲ್ಲಿ ಮೂವರು ಉಗ್ರರನ್ನು ಕೊಂದು ಹಾಕಲಾಗಿತ್ತು. ಅಂತೆಯೇ ಕರಣ್ ನಗರದಲ್ಲಿ ನಡೆದ ಉಗ್ರ ದಾಳಿಯಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿತ್ತು. ಈ ಎರಡು  ದಾಳಿಗಳ ಬಳಿಕ ಗಡಿಯಲ್ಲಿ ಕಟ್ಟೆಚ್ಚರದಿಂದ ಇರುವಂತೆ ಸೈನಿಕರಿಗೆ ಭಾರತೀಯ ಸೇನೆಯ ಅಧಿಕಾರಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com