ಇದೇ ವೇಳೆ ಪುದುಚೇರಿ ಮತ್ತು ಕೇರಳಕ್ಕೆ ಮಾಡಿರುವ ನೀರು ಹಂಚಿಕೆಯನ್ನು ಎತ್ತಿ ಹಿಡಿದ ಕೋರ್ಟ್, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದಳು ಸಮಾನ ಹಂಚಿಕೆ ತತ್ವ ಪರಿಪಾಲಿಸಹಬೇಕು ಎಂದು ಸಲಹೆ ನೀಡಿದೆ. ಅಂತೆಯೇ ನದಿಗಳು ರಾಷ್ಟ್ರೀಯ ಸಂಪತ್ತುಗಳಾಗಿದ್ದು, ಯಾವುದೇ ರಾಜ್ಯ ಪೂರ್ಣ ಹಕ್ಕು ಸಾಧಿಸುವಂತಿಲ್ಲ ಎಂದು ಉಭಯ ರಾಜ್ಯಗಳಿಗೆ ಕಿವಿಮಾತು ಹೇಳಿದೆ.
ಅಂತೆಯೇ ತನ್ನ ತೀರ್ಪಿನಲ್ಲಿ ಬ್ರಿಟೀಷ್ ಕಾಲದ ಒಪ್ಪಂದಗಳ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, 1892, 1924ರ ಎರಡೂ ಒಪ್ಪಂದಗಳು ಸಿಂಧುವಾಗಿದ್ದು, 1924ರ ಒಪ್ಪಂದ ಕಾನೂನು ಬದ್ಧಬದ್ಧವಾಗಿದೆ ಎಂದು ಕೋರ್ಟ್ ಹೇಳಿದೆ. ಅಂತೆಯೇ ಈ ಒಪ್ಪಂದಗಳು 50 ವರ್ಷಗಳ ಬಳಿಕ ರದ್ದಾಗಲಿದ್ದು, 0ನ್ಯಾಯಾಧಿಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ ಎಂದು ಹೇಳಿದೆ. ಅಂತೆಯೇ 15 ವರ್ಷಗಳ ಬಳಿಕ ನ್ಯಾಯಾಧಿಕರಣದ ತೀರ್ಪನ್ನು ಮರುಪರಿಶೀಲನೆ ಮಾಡಬಹುದಾಗಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿತು.