ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11,300 ಕೋಟಿ ರುಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿಯ ಪಾಪ್ ಪೋರ್ಟ್ ಅನ್ನು ಕೇಂದ್ರ ಶುಕ್ರವಾರ ಅಮಾನತುಗೊಳಿಸಿದೆ.
ಜಾರಿ ನಿರ್ದೇಶನಾಲಯದ ಸಲಹೆ ಮೇರಗೆ ವಿದೇಶಾಂಗ ಸಚಿವಾಲಯ ನೀರವ್ ಮೋದಿಯ ಪಾಸ್ ಪೋರ್ಟ್ ಅನ್ನು ನಾಲ್ಕು ವಾರಗಳ ಕಾಲ ಅಮಾನತುಗೊಳಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಪಾಸ್ ಪೋರ್ಟ್ ಕಾಯ್ದೆ 1967ರ ಅನ್ವಯ ನೀರವ್ ಮೋದಿ ಹಾಗೂ ಆತನ ಉದ್ಯಮ ಪಾಲುದಾರ ಮೆಹುಲ್ ಚೊಕ್ಸಿಯ ಪಾಸ್ ಪೋರ್ಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದ್ದಾರೆ.
ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುವ ಮುನ್ನವೇ ವಂಚಕ ಉದ್ಯಮಿ ಕುಟುಂಬ ಸಮೇತ್ ಭಾರತ ತೊರೆದಿದ್ದಾರೆ.