ದೇಶ

ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿ, ಕುಟುಂಬದ ಸಂಸ್ಥೆಗಳ 29 ಆಸ್ತಿ, 105 ಬ್ಯಾಂಕ್ ಖಾತೆ ಐಟಿ ವಶಕ್ಕೆ!

ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿ, ಕುಟುಂಬದ ಸಂಸ್ಥೆಗಳ 29 ಆಸ್ತಿ, 105 ಬ್ಯಾಂಕ್ ಖಾತೆ ಐಟಿ ವಶಕ್ಕೆ!
ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿ, ಕುಟುಂಬದ ಸಂಸ್ಥೆಗಳ 29 ಆಸ್ತಿ, 105 ಬ್ಯಾಂಕ್ ಖಾತೆ ಐಟಿ ವಶಕ್ಕೆ!
Published On :
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನೀರವ್ ಮೋದಿ, ಕುಟುಂಬದ ಸಂಸ್ಥೆಗಳ 29 ಆಸ್ತಿಗಳು ಹಾಗೂ 105 ಬ್ಯಾಂಕ್ ಖಾತೆಗಳನ್ನು ಐಟಿ ವಶಕ್ಕೆ ಪಡೆದಿದೆ. 
ಆಸ್ತಿಯನ್ನು ವಶಕ್ಕೆ ಪಡೆಯುವುದಷ್ಟೇ ಅಲ್ಲದೇ ನೀವರ್ ಮೋದಿ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಪ್ಪುಹಣ ವಿರೋಧಿ ಕಾಯ್ದೆಯನ್ನೂ ಹೇರಿದೆ. 
ನೀರವ್ ಮೋದಿಯ ಆಸ್ತಿ ಸಿಂಗಪೂರ್ ನಲ್ಲಿಯೂ ಇದ್ದು ತೆರಿಗೆ ವಂಚನೆ, ತಪ್ಪು ಮಾಹಿತಿ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ವಿವಿಧ ಸೆಕ್ಷನ್ ಗಳಡಿಯಲ್ಲಿ ಆದಾಯ ತೆರಿಗೆ ಇಲಾಖೆ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದು ಫೆ.27 ರಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.